ADVERTISEMENT

ಜೇಮ್ಸ್‌ ಪೋಸ್ಟರ್‌: ಮೆಷಿನ್‌ ಗನ್‌ ಹಿಡಿದು ಬಂದ ಪುನೀತ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 12:55 IST
Last Updated 17 ಮಾರ್ಚ್ 2020, 12:55 IST
ಜೇಮ್ಸ್‌ 
ಜೇಮ್ಸ್‌    

ನಟ ಪುನೀತ್‌ ರಾಜ್‌ಕುಮಾರ್‌ ಜನ್ಮ ದಿನದ ಪ್ರಯುಕ್ತ ‘ಜೇಮ್ಸ್‌’ ಚಿತ್ರ ತಂಡವು ವಿಶೇಷ ರೇಸಿ ಮೋಷನ್‌ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಬಿಡುಗಡೆ ಮಾಡಿದೆ.

‘ಕಷ್ಟ ಬಂದಾಗ ಹೆದುರ್ಕೋಳೊರು ಕಾಮನ್‌ ಎಲ್ಲನೂ ಎದುರಿಸಿ ಮುಂದೆ ನಿಲ್ಲೋನು ನಂಬರ್‌ 1’ ಒಕ್ಕಣೆಯಿಂದ ಈ ಮೋಷನ್‌ ಪೋಸ್ಟರ್‌ಶುರುವಾಗುತ್ತದೆ. ಕಾರಿನಲ್ಲಿ ಟ್ರಕ್‌ವೊಂದನ್ನು ಬೆನ್ನಟ್ಟಿ ಹೋಗುವಜೇಮ್ಸ್‌ ಪಾತ್ರಧಾರಿ ಪುನೀತ್‌ ರಾಜ್‌ಕುಮಾರ್‌, ಅದನ್ನು ಸೇತುವೆಮೇಲೆ ಅಡ್ಡಗಟ್ಟಿ ಮಿಷನ್‌ಗನ್ನಿನಿಂದ ಭಸ್ಮ ಮಾಡುವ ದೃಶ್ಯ ಸಿನಿ ರಸಿಕರಿಗೆ ರೋಮಾಂಚನ ನೀಡುವಂತಿದೆ. ಈ ಮೋಷನ್‌ ಪೋಸ್ಟರ್‌ ಬಿಡುಗಡೆಯಾದ 11 ನಿಮಿಷಗಳಲ್ಲಿ 27 ಸಾವಿರಕ್ಕೂ ಹೆಚ್ಚು ಮಂದಿ ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಿದ್ದರು.

‘ಬಹದ್ದೂರ್‌’ ಖ್ಯಾತಿಯ ಚೇತನ್‌ ಕುಮಾರ್‌‘ಜೇಮ್ಸ್’ಗೆಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.ಜೇಮ್ಸ್‌ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವೂ ಚೇತನ್‌ ಅವರೇ ನಿಭಾಯಿಸಿದ್ದಾರೆ.

ADVERTISEMENT

ಜೇಮ್ಸ್ಚಿತ್ರದಲ್ಲಿ ಪುನೀತ್‌ಗೆ ತೆಲುಗಿನ ನಟಿ ನಿಧಿ ಅಗರ್‌ವಾಲ್‌ ಅಥವಾ ಬಹುಭಾಷಾ ತಾರೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಬಹುದೆಂಬ ಮಾತುಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.