ADVERTISEMENT

ಪುನೀತ್‌ ವರ್ಕೌಟ್‌ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 4:15 IST
Last Updated 5 ಜೂನ್ 2020, 4:15 IST
ಪುನೀತ್‌
ಪುನೀತ್‌   

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ವರ್ಕೌಟ್‌ಗಳ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದು, ಆ ವಿಡಿಯೊಗಳು ಇಂಟರ್‌ನೆಟ್‌ ಸೆನ್ಸೇಷನ್‌ ಆಗಿವೆ.

ಫಿಟ್‌ನೆಸ್‌ ಪ್ರಿಯ ಪುನೀತ್‌ ರಾಜ್‌ಕುಮಾರ್‌ ಈಗ ಮತ್ತೊಂದು ಹೊಸ ವಿಡಿಯೊವನ್ನು ಹಂಚಿಕೊಂಡಿದ್ದಾರೆ.ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿರುವ ಪುನೀತ್‌, ಫಿಟ್‌ ಆಗಿರಲು ಸಿಕ್ಕಾಪಟ್ಟೆ ದೇಹ ದಂಡಿಸುತ್ತಾರೆ. ‘ವರ್ಕೌಟ್‌ ಆಫ್‌ ದ ಡೇ’ ಎಂಬ ಅಡಿಬರಹದಲ್ಲಿ ಅವರು ಹಂಚಿಕೊಂಡಿರುವ ವಿಡಿಯೊಗೆ ಸೆಲೆಬ್ರಿಟಿ ನಟ– ನಟಿಯರು ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಆ್ಯಬ್ಸ್‌ ಆ್ಯಂಡ್‌ ಕೋರ್‌ ಬರ್ಪಿ, ಪುಶಪ್‌ ಕಿಕ್‌ಬ್ಯಾಕ್‌, ಪುಶಪ್‌ ಹ್ಯಾಂಡ್ಸ್‌ ಸ್ಟ್ಯಾಂಡ್‌ನಂತಹ ಕಸರತ್ತುಗಳನ್ನು ಬಲು ಸುಲಭವೆಂಬಂತೆ ಮಾಡುವ ಅವರ ಸಾಮರ್ಥ್ಯ‌ ಯುವಕರನ್ನು ಫಿಟ್‌ನೆಸ್‌‌ ಕಡೆಗೆ ಸೆಳೆಯುವಂತಿವೆ. ಈ ವಿಡಿಯೊವನ್ನು 3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.