ADVERTISEMENT

ಪುಷ್ಪ–2: ಕಾಲ್ತುಳಿತ– ಗಾಯಗೊಂಡಿದ್ದ ಬಾಲಕನ ಭೇಟಿಯಾಗಿ ಸಾಂತ್ವನ ಹೇಳಿದ ಸುಕುಮಾರ್

ಹೈದರಾಬಾದ್‌ನಲ್ಲಿ ಪುಷ್ಪ–2 ಚಿತ್ರ ವೀಕ್ಷಣೆಗೆ ಹೋದಾಗ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಬಾಲಕನನ್ನು ನಿರ್ದೇಶಕ ಸುಕುಮಾರ್ ಭೇಟಿಯಾಗಿದ್ದಾರೆ.

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 12:45 IST
Last Updated 20 ಡಿಸೆಂಬರ್ 2024, 12:45 IST
<div class="paragraphs"><p>ಸುಕುಮಾರ್</p></div>

ಸುಕುಮಾರ್

   

ಬೆಂಗಳೂರು: ಹೈದರಾಬಾದ್‌ನಲ್ಲಿ ಪುಷ್ಪ–2 ಚಿತ್ರ ವೀಕ್ಷಣೆಗೆ ಹೋದಾಗ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಬಾಲಕನನ್ನು ಹಾಗೂ ಅವರ ತಂದೆಯನ್ನು ನಿರ್ದೇಶಕ ಸುಕುಮಾರ್ ಭೇಟಿಯಾಗಿದ್ದಾರೆ.

ಸದ್ಯ 8 ವರ್ಷದ ಬಾಲಕ ಇನ್ನೂ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಆತನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ಹೇಳಿವೆ.

ADVERTISEMENT

ಬಾಲಕನ ಕುಟುಂಬಕ್ಕೆ ಸುಕುಮಾರ್ ಅವರು ₹5 ಲಕ್ಷ ಹಣ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಡಿಸೆಂಬರ್ 10 ರಂದು ಹೈದರಾಬಾದ್‌ನ ಸಂದ್ಯಾ ಚಿತ್ರಮಂದಿರದಲ್ಲಿ ಪುಷ್ಪ–2 ವೀಕ್ಷಣೆಗೆ ಬಂದಿದ್ದ ಕುಟುಂಬವೊಂದರ ತಾಯಿ– ಮಗು ನೂಕಲಾಟ ಮತ್ತು ಕಾಲ್ತುಳಿತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಘಟನೆಯ ಬಗ್ಗೆ ದೂರು ದಾಖಲಾಗಿದ್ದರಿಂದ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ಅವರ ಬಂಧನವೂ ಆಗಿತ್ತು. ಒಂದು ದಿನ ಜೈಲಿನಲ್ಲಿ ಕಳೆದು ಬಿಡುಗಡೆಗೊಂಡಿದ್ದರು.

ಸಂದ್ಯಾ ಚಿತ್ರಮಂದಿರದ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.