ಬೆಂಗಳೂರು: ನಟ ಅಲ್ಲು ಅರ್ಜುನ್ –ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಟ ದಿ ರೈಸ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಈಗಾಗಲೇ ಯಶಸ್ಸು ಗಳಿಸಿದೆ.
ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಸಿನಿಮಾ ಡಿ. 17ರಂದು ವಿಶ್ವದಾದ್ಯಂತ ತೆರೆಕಂಡಿದ್ದು, ಇದುವರೆಗೆ ₹365 ಕೋಟಿಗೂ ಅಧಿಕ ಹಣ ಗಳಿಸಿದೆ.
ಈ ಸಿನಿಮಾ ಜ.14ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಮೂರು ವಾರದಲ್ಲಿ ₹4.41 ಕೋಟಿ ಹಣ ಗಳಿಸಿ ಸದ್ದು ಮಾಡುತ್ತಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಕೆಲವು ಚಿತ್ರಮಂದಿರಗಳಲ್ಲಿ ಪುಷ್ಪ ಸಿನಿಮಾ ಇನ್ನು ಪ್ರದರ್ಶನಗೊಳ್ಳುತ್ತಿದೆ ಎಂದು ವರದಿಯಾಗಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಬೇರೆ ಚಿತ್ರಗಳ ಪೈಪೋಟಿಯ ಹೊರತಾಗಿಯೂ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಮಾಡಿದೆ.
ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಕೂಡ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹೀಗಿದ್ದರೂ ಪುಷ್ಪ ಸಿನಿಮಾದ ಅಬ್ಬರ ಕಡಿಮೆಯಾಗಿಲ್ಲ. ಈ ಸಿನಿಮಾದ ಹಿಂದಿ ಅವತರಣಿಕೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
'ಉರಿ: ದ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ 7 ವಾರದಲ್ಲಿ ₹6.67 ಕೋಟಿ ಗಳಿಸಿ ದಾಖಲೆ ಮಾಡಿತ್ತು. ಇದೀಗ ‘ಪುಷ್ಪ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ 3 ವಾರದಲ್ಲಿ ₹4.41 ಕೋಟಿ ಗಳಿಸಿ ಮತ್ತೊಂದು ದಾಖಲೆ ಬರೆದಿದೆ. ಪದ್ಮಾವತ್ ₹3.82 ಕೋಟಿ, 'ತ್ರೀ ಈಡಿಯಟ್ಸ್' ₹3.37 ಕೋಟಿ ಬಾಚಿಕೊಂಡಿತ್ತು.
ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.