ಸ್ಯಾಂಡಲ್‌ವುಡ್‌ನ ‘ಬುಲ್‌ಬುಲ್’ ರಚಿತಾ ರಾಮ್ ಸದ್ಯ ‘ಕೂಲಿ’ಯ ಕಲ್ಯಾಣಿಯಾಗಿ ಮಿಂಚುತ್ತಿದ್ದಾರೆ. ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿನ ನೆಗೆಟಿವ್ ಪಾತ್ರ ರಚಿತಾ ರಾಮ್ ಸಿನಿಬದುಕಿಗೆ ತಿರುವು ನೀಡುವಂತಿದೆ.
ತಮ್ಮ ಪಾತ್ರಕ್ಕೆ ಸಿಕ್ಕಿರುವ ಪ್ರಶಂಸೆ, ಪಾತ್ರದ ವಿಮರ್ಶೆಯನ್ನು ಕಂಡು ರಚಿತಾ ರಾಮ್ ಖುಷಿಯಾಗಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರಚಿತಾ, ‘ಕೂಲಿ ಸಿನಿಮಾದಲ್ಲಿನ ನನ್ನ ಕಲ್ಯಾಣಿ ಪಾತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಅದ್ಭುತವಾಗಿದೆ. ನನ್ನ ಪಾತ್ರಕ್ಕೆ ಬಂದ ವಿಮರ್ಶೆ, ಟ್ರೋಲ್, ಮೀಮ್‌ಗಳನ್ನು ಹಾಗೂ ಪ್ರೀತಿಯನ್ನು ಕಂಡು ಖುಷಿಯಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಟ್ಟು ಈ ಅವಕಾಶ ನೀಡಿದ ನಿರ್ದೇಶಕರಾದ ಲೋಕೇಶ್ ಕನಗರಾಜ್ ಅವರಿಗೆ ಧನ್ಯವಾದ. ಖ್ಯಾತ ನಟರ ಜೊತೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ’ ಎಂದಿದ್ದಾರೆ.
‘ಕೂಲಿ’ ಸಿನಿಮಾದಲ್ಲಿ ಮುಗ್ಧ ‘ಕಲ್ಯಾಣಿ’ಯಾಗಿ, ವ್ಯಗ್ರ ಚಾಲಾಕಿ ‘ಕಲ್ಯಾಣಿ’ಯಾಗಿ ಹೀಗೆ ಎರಡು ಶೇಡ್‌ಗಳಲ್ಲಿ ನಟಿಸಿರುವ ರಚಿತಾ ರಾಮ್ ಕನ್ನಡದಲ್ಲೂ ಎರಡು ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಝೈದ್ ಖಾನ್ ನಟನೆಯ ‘ಕಲ್ಟ್’ ಹಾಗೂ ಸತೀಶ್ ನೀನಾಸಂ ನಟನೆಯ ‘ಅಯೋಗ್ಯ–2’ ರಚಿತಾ ಸಿನಿ ಬ್ಯಾಂಕ್‌ನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.