ADVERTISEMENT

ಬಾತ್‌ರೂಂನಲ್ಲಿ ಆಲ್ಕೋಹಾಲ್ ಹೀರುತ್ತಾ ಎದೆಹಾಲು ತೆಗೆದ ನಟಿ ರಾಧಿಕಾ ಆಪ್ಟೆ: ಟೀಕೆ

ಲಂಡನ್‌ನಲ್ಲಿ ನಡೆದ 78 ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ ( BAFTAs) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಾಧಿಕಾ ಆಪ್ಟೆ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2025, 3:00 IST
Last Updated 19 ಫೆಬ್ರುವರಿ 2025, 3:00 IST
<div class="paragraphs"><p>ನಟಿ ರಾಧಿಕಾ ಆಪ್ಟೆ</p></div>

ನಟಿ ರಾಧಿಕಾ ಆಪ್ಟೆ

   

ಬೆಂಗಳೂರು: ಲಂಡನ್‌ನಲ್ಲಿ ನಡೆದ 78 ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ ( BAFTAs) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಾಧಿಕಾ ಆಪ್ಟೆ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕೆಲವೇ ದಿನಗಳಲ್ಲಿ ಅವರು ತಮ್ಮ ಕೆಲಸ ಕಾರ್ಯಗಳಿಗೆ ಮರಳಿದ್ದಾರೆ. ಫೆಬ್ರುವರಿ 16 ರಂದು ನಡೆದ BAFTAs ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಕಾರ್ಯಕ್ರಮದ ಒತ್ತಡದಲ್ಲಿದ್ದರು.

ADVERTISEMENT

ಈ ವೇಳೆ ಮಗುವಿಗೆ ಎದೆಹಾಲು ಕುಡಿಸಬೇಕು ಎನ್ನುವ ಉದ್ದೇಶದಿಂದ ರಾಧಿಕಾ ಅವರು ಬಾತ್‌ರೂಂಗೆ ತೆರಳಿ ಬಾಟಲ್‌ನಲ್ಲಿ ಎದೆಹಾಲು ಸಂಗ್ರಹಿಸಿದ್ದಾರೆ. ಈ ವೇಳೆ ಅವರು ಆಲ್ಕೋಹಾಲ್ ಇರುವ (ಕಡಿಮೆ ಪ್ರಮಾಣದಲ್ಲಿ) ಶಾಂಪೇನ್ ಹೀರುತ್ತಾ ಎದೆಹಾಲು ಸಂಗ್ರಹಿಸಿದ್ದಾರೆ.

ಸ್ವತಃ ಈ ಫೋಟೊವನ್ನು ರಾಧಿಕಾ ಆಪ್ಟೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಕೆಲಸದ ಒತ್ತಡದ ನಡುವೆ ನಟಿ ನತಾಶಾ ನನ್ನನ್ನು ಮಗುವಿಗೆ ಹಾಲುಣಿಸುವುದಕ್ಕಾಗಿ ಹಾಲು ಸಂಗ್ರಹಿಸಿಕೊಂಡು ಬರಲು ಬಾತ್‌ರೂಂಗೆ ಕರೆದುಕೊಂಡು ಹೋದರು. ಅಲ್ಲದೇ ಆ ಸಮಯದಲ್ಲಿ ಅಲ್ಲಿಯೇ ನನಗೆ ಶಾಂಪೇನ್ ಸಹ ತಂದು ಕೊಟ್ಟರು. ಮಗು ಜನಿಸಿದಾಗ ನಮ್ಮಂಥವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವುದು ಸವಾಲಿನ ಕೆಲಸ. ಹಾಗಾಗಿ ಚಿತ್ರರಂಗದಲ್ಲಿ ಈ ಮಟ್ಟದ ಕಾಳಜಿ ಹಾಗೂ ಸೂಕ್ಷ್ಮತೆ ಮೆಚ್ಚುವಂಥದ್ದು ಎಂದು ಬರೆದುಕೊಂಡಿದ್ದಾರೆ.‌

ರಾಧಿಕಾ ಆಪ್ಟೆ ಆಲ್ಕೋಹಾಲ್ ಹೀರುತ್ತಾ ಹೀಗೆ ಮಾಡಿದ್ದನ್ನು ಹಲವರು ಖಂಡಿಸಿದ್ದಾರೆ. ನೀವು ತಪ್ಪು ಸಂದೇಶ ನೀಡುತ್ತಿದ್ದಿರಿ. ಆಲ್ಕೋಹಾಲ್ ಹೀರಿ ಹಾಲುಣಿಸುವುದು ಎಷ್ಟು ಸರಿ? ಎಂಬುದನ್ನು ತಿಳಿದುಕೊಂಡಿದ್ದಿರಾ ಎಂದು ಪ್ರಶ್ನಿಸಿದ್ದಾರೆ.

ಬ್ರಿಟಿಷ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಬೆನ್ಡಿಕ್ಟ್ ಟೇಲರ್ ಜೊತೆ ರಾಧಿಕಾ ಆಪ್ಟೆ 2013ರಲ್ಲಿ ಆಪ್ತರ ಸಮ್ಮುಖದಲ್ಲಷ್ಟೇ ಮದುವೆಯಾಗಿದ್ದರು. ಇದು ಅವರ ಮೊದಲ ಹೆರಿಗೆ.

ರಾಧಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ Sister Midnight ಸಿನಿಮಾ BAFTAsಗೆ ನಾಮನಿರ್ದೇಶನ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.