ADVERTISEMENT

ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್‌ಗೆ ಅಭಿಮಾನಿಗಳಿಂದ ಉಘೇ...ಉಘೇ...

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 7:09 IST
Last Updated 18 ಜನವರಿ 2022, 7:09 IST
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ   

ಚಂದನವನದ ನಟಿ ರಾಧಿಕಾಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಚಂದನವನದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಅಭಿಮಾನಿಗಳಿಗೆ ಹತ್ತಿರವಾಗಲು ಫೋಟೊಗಳನ್ನುಕೂಡ ಶೇರ್‌ ಮಾಡುತ್ತಿರುತ್ತಾರೆ. ಸೋಮವಾರ ಅಪ್ಲೋಡ್‌ ಮಾಡಿರುವ ಅವರ ಡ್ಯಾನ್ಸ್‌ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು ಆ ನೃತ್ಯಕ್ಕೆ ಅಭಿಮಾನಿಗಳು ಉಘೇ ಉಘೇ ಎಂದಿದ್ದಾರೆ.

ಈ ಡ್ಯಾನ್ಸ್‌ನಲ್ಲಿ ಸ್ಟೈಲಿಶ್‌ ಆಗಿ ಕಾಣುವ ರಾಧಿಕಾಸಖತ್‌ ಎನರ್ಜಿಯಿಂದ ನೃತ್ಯ ಮಾಡಿದ್ದಾರೆ. ಬಾಲಿವುಡ್‌ನ ‘ಮೇರಾ ಯಾರಾ’ ಹಾಡಿಗೆ ಡಾನ್ಸ್‌ ಮಾಡಿದ್ದಾರೆ. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೊಸ ವರ್ಷದ ದಿನ ಅವರು ಹಂಚಿಕೊಂಡಿದ್ದ ಮತ್ತೊಂದು ಡ್ಯಾನ್ಸ್‌ ಕೂಡ ಅಭಿಮಾನಿಗಳ ಮನಗೆದ್ದಿತ್ತು.

ADVERTISEMENT

ರಾಧಿಕಾ ಸದ್ಯ ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾಂಟ್ರಾಕ್ಟ್, ಭೈರಾದೇವಿ ಹಾಗೂ ರಾಜೇಂದ್ರ ಪೊನ್ನಪ್ಪ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಇದೇ ವರ್ಷ ಈ ಸಿನಿಮಾಗಳು ತೆರೆಕಾಣುವ ಸಾಧ್ಯತೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.