ADVERTISEMENT

ಮುಗ್ದಾ ಜತೆ ರಾಹುಲ್‌ ದೇವ್‌ ಡೇಟಿಂಗ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 12:57 IST
Last Updated 4 ಆಗಸ್ಟ್ 2021, 12:57 IST
ಮುಗ್ದಾ, ರಾಹುಲ್‌
ಮುಗ್ದಾ, ರಾಹುಲ್‌   

ಬಾಲಿವುಡ್‌ ನಟ ರಾಹುಲ್ ದೇವ್‌ ತಮ್ಮ ಡೇಟಿಂಗ್‌ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ನಟಿ ಹಾಗೂ ರೂಪದರ್ಶಿ ಮುಗ್ದಾ ಗೋಡ್ಸೆ ಅವರೊಂದಿಗೆ ಡೇಟಿಂಗ್‌ ಮಾಡುತ್ತಿರುವುದಾಗಿ ರಾಹುಲ್‌ ದೇವ್ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

2013ರಿಂದಲೂ ಮುಗ್ದಾ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾನೆ. ನನ್ನ ಜೀವನದಲ್ಲಿ ಮತ್ತೆ ಪ್ರೀತಿ ಚಿಗುರುತ್ತೆ ಎಂದು ಅಂದುಕೊಂಡಿರಲಿಲ್ಲ, ಮುಗ್ದಾ ಅವರಿಂದಾಗಿ ನನ್ನ ಜೀವನದಲ್ಲಿ ಮತ್ತೆ ಉಲ್ಲಾಸವನ್ನು ಕಾಣುತ್ತಿದ್ದೇನೆ ಎಂದು ರಾಹುಲ್‌ ಹೇಳಿದ್ದಾರೆ.

ADVERTISEMENT

2009ರಲ್ಲಿ ರಾಹುಲ್‌ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಂತರ 4 ವರ್ಷಗಳ ಕಾಲ ಏಕಾಂಗಿ ಜೀವನ ನಡೆಸಿದ ರಾಹುಲ್‌ 2013ರಲ್ಲಿ ಮುಗ್ದಾ ಅವರೊಂದಿಗೆ ಡೇಟಿಂಗ್ ಆರಂಭಿಸಿದರು. ಕಳೆದ 8 ವರ್ಷಗಳಿಂದ ರಾಹುಲ್‌ ಮುಗ್ದಾ ಜತೆ ಸಹಜೀವನ ನಡೆಸುತ್ತಿದ್ದಾರೆ.

ಬಾಲಿವುಡ್‌ ಸೇರಿದಂತೆ ತೆಲುಗು, ತಮಿಳು ಕನ್ನಡದ ಹಲವು ಸಿನಿಮಾಗಳಲ್ಲಿ ರಾಹುಲ್‌ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.