ADVERTISEMENT

ರಾಜ್‌ಕುಮಾರ್‌ ಸಂಭಾವನೆ ₹9 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:58 IST
Last Updated 24 ಸೆಪ್ಟೆಂಬರ್ 2019, 19:58 IST
ರಾಜ್ ಕುಮಾರ್ ರಾವ್
ರಾಜ್ ಕುಮಾರ್ ರಾವ್   

ನಟ ರಾಜ್‌ಕುಮಾರ್‌ ರಾವ್ ‘ಚುಪ್ಕೆ ಚುಪ್ಕೆ’ ರಿಮೇಕ್‌ಗೆ ಭಾರಿ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಬಿ–ಟೌನ್‌ನಲ್ಲಿ ಸುದ್ದಿ ಹಬ್ಬಿದೆ.

‘ಸ್ತ್ರೀ’ ಹಾಗೂ ‘ಜಡ್ಜ್‌ಮೆಂಟಲ್‌ ಹೈ ಕ್ಯಾ’ ಚಿತ್ರದ ಯಶಸ್ಸಿನ ನಂತರ ಈ ನಟ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ‘ಚುಪ್ಕೆ ಚುಪ್ಕೆ’ ರಿಮೇಕ್‌ ಚಿತ್ರಕ್ಕೆ ರಾಜ್‌ಕುಮಾರ್ ರಾವ್‌ ₹ 9 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಲವ್‌ ರಂಜನ್‌ ನಿರ್ದೇಶಿಸುತ್ತಿದ್ದಾರೆ.

ಮೂಲ ಚಿತ್ರದಲ್ಲಿ ನಟ ಧರ್ಮೇಂದ್ರ ಮಾಡಿರುವ ಪಾತ್ರವನ್ನು ರಾಜ್‌ಕುಮಾರ್‌ ಮಾಡಲಿದ್ದಾರೆ. ಸಿನಿಮಾದ ಉಳಿದ ಪಾತ್ರಕ್ಕೆ ಕಲಾವಿದರ ಆಯ್ಕೆ ನಡೆಯಬೇಕಷ್ಟೇ. ಸದ್ಯ ರಾಜ್‌ಕುಮಾರ್‌ ಜಾಹ್ನವಿ ಕಪೂರ್‌ ಜೊತೆ ‘ರೂಹಿ ಆಫ್ಜಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹನ್ಸಾಲ್‌ ಮೆಹ್ತಾ ಅವರ ಸಿನಿಮಾದಲ್ಲೂ ಅವರು ನಟಿಸುತ್ತಿದ್ದು, ಆ ಚಿತ್ರದ ನಾಯಕಿ ನುಶ್ರತ್‌ ಭರುಚಾ.

ADVERTISEMENT

ದಿನೇಶ್‌ ವಿಜನ್‌ ಅವರ ‘ಮೇಡ್‌ ಇನ್‌ ಚೀನಾ’ ಎಂಬ ಹಾಸ್ಯ ಪ್ರಧಾನ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.