ADVERTISEMENT

ರಜನಿಕಾಂತ್‌ ಅಭಿನಯದ ಜೈಲರ್‌ ಚಿತ್ರ: ಸಿನಿಮಾ ನೋಡಲು ಜಪಾನಿನ ದಂಪತಿ ಚೆನ್ನೈಗೆ

ಪಿಟಿಐ
Published 10 ಆಗಸ್ಟ್ 2023, 6:03 IST
Last Updated 10 ಆಗಸ್ಟ್ 2023, 6:03 IST
‘ಜೈಲರ್’ ಚಿತ್ರದಲ್ಲಿ ತಮನ್ನಾ, ರಜನೀಕಾಂತ್
‘ಜೈಲರ್’ ಚಿತ್ರದಲ್ಲಿ ತಮನ್ನಾ, ರಜನೀಕಾಂತ್   

ಚೈನ್ನೆ: ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಬಹುನಿರೀಕ್ಷಿತ ಸಿನಿಮಾ ಜೈಲರ್‌ ಇಂದು( ಗುರುವಾರ) ಬಿಡುಗಡೆಗೊಂಡಿದೆ. ಬೆಳ್ಳಿ ತೆರೆಮೇಲೆ ತಲೈವಾ ಅವರನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳು ಹೌಸ್‌ ಫುಲ್‌ ಆಗಿದ್ದು, ಮೊದಲ ದಿನ ಫಸ್ಟ್‌ ಶೋ ನೋಡಿದ ಅಭಿಮಾನಿಗಳು ರಜನಿಕಾಂತ್‌ ಅವರ ನಟನೆಗೆ ಫಿದಾ ಆಗಿದ್ದಾರೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಜೈಲರ್‌ ಚಿತ್ರದ ಟೀಸರ್ ಬಿಡುಗಡೆಗೊಂಡಾಗಿನಿಂದಲೂ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು.

ADVERTISEMENT

ಜೈಲರ್‌ ಚಿತ್ರ ನೋಡಲು ಜಪಾನಿನ ದಂಪತಿ ಚೆನ್ನೈಗೆ ಬಂದಿದ್ದಾರೆ.

‘20 ವರ್ಷಗಳಿಂದ ರಜನಿಕಾಂತ್‌ ಅವರ ಚಿತ್ರಗಳನ್ನು ನೋಡಿಕೊಂಡು ಬಂದಿದ್ದೇವೆ’ ಎಂದು ಜಪಾನ್‌ನ ರಜನಿಕಾಂತ್ ಅಭಿಮಾನಿಗಳ ಸಂಘದ ಅಧ್ಯಕ್ಷೆ ಯಸುಡ ಹಿಡೆತೋಶಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಜೈಲರ್‌ ಸಿನಿಮಾವನ್ನು ಸಂಭ್ರಮಾಚರಣೆಯೊಂದಿಗೆ ಬರಮಾಡಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈ ಬಾರಿ ವಿಶೇಷವಾದ ಫ್ಯಾನ್ಸ್ ಶೋ ಇರುವುದಿಲ್ಲ ಎಂದು ತಮಿಳುನಾಡಿನ ಥಿಯೇಟರ್ ಮಾಲೀಕರ ಸಂಘದ ಅಧ್ಯಕ್ಷ ತಿರುಪುರ್ ಸುಬ್ರಮಣ್ಯಮ್ ಈ ಹಿಂದೆ ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದರು.

ಚಿತ್ರ ಯಶಸ್ವಿಯಾಗಲೇಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಸನ್ ಪಿಕ್ಚರ್ಸ್ ಚಿತ್ರ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ.

ಜೈಲರ್' ಚಿತ್ರದಲ್ಲಿ ತಮನ್ನಾ, ಮೋಹನ್‌ಲಾಲ್ ಮತ್ತು ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ವಿನಾಯಕನ್ ಮತ್ತು ಹಾಸ್ಯನಟ ಯೋಗಿ ಬಾಬು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.