ADVERTISEMENT

ಬಾಕ್ಸ್‌ ಆಫೀಸ್‌ನಲ್ಲಿ ಕೂಲಿ ಕಮಾಲ್‌: ₹504 ಕೋಟಿ ಕಲೆಕ್ಷನ್‌ ಮಾಡಿದ ರಜನಿ ಸಿನಿಮಾ

ಪಿಟಿಐ
Published 1 ಸೆಪ್ಟೆಂಬರ್ 2025, 6:53 IST
Last Updated 1 ಸೆಪ್ಟೆಂಬರ್ 2025, 6:53 IST
   

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಅಭಿನಯದ ತಮಿಳು ಚಲನಚಿತ್ರ ‘ಕೂಲಿ’ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ₹ 504 ಕೋಟಿ ಕಲೆಕ್ಷನ್‌ ಮಾಡಿದೆ.

ತಮಿಳಿನ ಕೈಥಿ, ಮಾಸ್ಟರ್‌, ಲಿಯೋ, ವಿಕ್ರಮ್‌ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಖ್ಯಾತ ನಿರ್ದೇಶಕ ಲೋಕೇಶ್‌ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾವು ಆಗಸ್ಟ್‌ 14ರಂದು ಬಿಡುಗಡೆಯಾಗಿತ್ತು.

ಕೂಲಿ ಸಿನಿಮಾವು ಬಿಡುಗಡೆಯಾದ ಮೊದಲ ದಿನವೇ ₹ 151 ಕೋಟಿ ಬಾಚಿಕೊಂಡಿತ್ತು. ಇದುವರೆಗೂ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ₹ 504 ಕೋಟಿ ಕಲೆಕ್ಷನ್‌ ಮಾಡಿದ್ದು, ಭಾರತದಲ್ಲೇ ₹ 327 ಕೋಟಿ ಗಳಿಸಿದೆ.

ADVERTISEMENT

ಕೂಲಿ ಸಿನಿಮಾವು ತಮಿಳಿನ ಸ್ಟಾರ್‌ ನಟ ರಜನಿಕಾಂತ್‌ ಅವರ 171ನೇ ಸಿನಿಮಾವಾಗಿದ್ದು, ಲೋಕೇಶ್‌ ಕನಗರಾಜ್‌ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸಿದ್ದರು.

ಸ್ಟಾರ್‌ ನಟರಾದ ಸೌಬಿನ್ ಶಾಹಿರ್, ಉಪೇಂದ್ರ, ಸತ್ಯರಾಜ್‌, ನಾಗಾರ್ಜುನ, ಅಮೀರ್‌ ಖಾನ್‌ ಅವರು ರಜನಿ ಜೊತೆ ಕಾಣಿಸಿಕೊಂಡಿದ್ದರು.

ಕೂಲಿ ಸಿನಿಮಾದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್‌ ಖರೀದಿಸಿದ್ದು, ಸದ್ಯದಲ್ಲೇ ಒಟಿಟಿಯಲ್ಲಿ ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.