ADVERTISEMENT

ಲವರ್ಸ್ ಡೇ ಹಿಂದಿನ ದಿನ ಬೇರ್ಪಟ್ಟ ರಾಖಿ ಸಾವಂತ್ - ರಿತೇಶ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 9:23 IST
Last Updated 14 ಫೆಬ್ರುವರಿ 2022, 9:23 IST
ರಾಖಿ ಸಾವಂತ್
ರಾಖಿ ಸಾವಂತ್   

ವ್ಯಾಲಂಟೈನ್‌ ಡೇ ಮುನ್ನಾ ದಿನ ನಾವು ಬೇರ್ಪಡುತ್ತಿರುವುದರ ಬಗ್ಗೆ ಬೇಸರವಿದೆ. ಆದರೆ ಈ ನಿರ್ಧಾರ ಅನಿವಾರ್ಯವಾಗಿತ್ತು... ರಿತೇಶ್‌ಗೆ ಒಳ್ಳೆಯದಾಗಲಿ...

ಇದು ನಟಿ ರಾಖಿ ಸಾವಂತ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡ ಪೋಸ್ಟ್‌.

ಬಿಗ್‌ಬಾಸ್‌ ಸೀಸನ್‌ 15ರಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಪ್ರವೇಶ ಪಡೆದಿದ್ದ ರಾಖಿ ಸಾವಂತ್‌ ಇದೀಗ ತಮ್ಮ ಪತಿ ರಿತೇಶ್‌ ಅವರಿಂದ ದೂರವಾಗಿದ್ದಾರೆ. ಬಿಗ್‌ಬಾಸ್‌ ಶೋ ಮುಗಿದ ಬಳಿಕ ನಾವೀಗ ಜಸ್ಟ್‌ ಫ್ರೆಂಡ್ಸ್‌ ಎಂದು ಹೇಳಿದ್ದರು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಪತಿ ರೀತೇಶ್‌ ಅವರಿಂದ ರಾಖಿ ದೂರವಾಗುತ್ತಿರುವುದರ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಬಿಗ್‌ಬಾಸ್‌ ಸರಣಿ ಮುಗಿದ ಕೆಲವೇ ದಿನಗಳ ಬಳಿಕ ದಾಂಪತ್ಯವೂ ಅಂತ್ಯವಾಗಿದೆ.

ADVERTISEMENT

ರಾಖಿ ಮುಂದಿನ ದಾರಿ ಏನು ಎಂಬ ಕುತೂಹಲ ಅಭಿಮಾನಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.