ADVERTISEMENT

ನ್ಯಾಯಾಲಯಕ್ಕೆ ಹಾಜರಾದ ನಟ ರಕ್ಷಿತ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 15:39 IST
Last Updated 12 ಏಪ್ರಿಲ್ 2021, 15:39 IST
ರಕ್ಷಿತ್‌ ಶೆಟ್ಟಿ
ರಕ್ಷಿತ್‌ ಶೆಟ್ಟಿ    

ಬೆಂಗಳೂರು: ಅನುಮತಿ ಇಲ್ಲದೇ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಹಾಡು ಬಳಸಿದ್ದ ಮೊಕದ್ದಮೆಯಲ್ಲಿ ತಮ್ಮ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದರಿಂದಾಗಿ ನಟ ರಕ್ಷಿತ್ ಶೆಟ್ಟಿ ನಗರದ 9ನೇ ಎಸಿಎಂಎಂ ನ್ಯಾಯಾಲಯ ಎದುರು ಸೋಮವಾರ ಹಾಜರಾದರು.

‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಲಹರಿ ಸಂಸ್ಥೆ ಅನುಮತಿ ಇಲ್ಲದೇ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಿದ್ದ ಆರೋಪ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋ ಮೇಲಿದೆ. ಅವರೆಲ್ಲರ ವಿರುದ್ಧ ಲಹರಿ ಸಂಸ್ಥೆಯವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ವಿಚಾರಣೆಗೆ ಹಲವು ಬಾರಿ ಗೈರಾಗಿದ್ದರಿಂದಾಗಿ ನಟ, ಸಂಗೀತ ನಿರ್ದೇಶಕ, ಪರಮ್ವಾ ಸ್ಟುಡಿಯೊ ಮಾಲೀಕರ ವಿರುದ್ಧ ಇತ್ತೀಚೆಗಷ್ಟೇ ವಾರೆಂಟ್ ಜಾರಿಯಾಗಿತ್ತು.

ADVERTISEMENT

ಅದರನ್ವಯ ವಕೀಲರ ಸಮ್ಮುಖದಲ್ಲಿ ನ್ಯಾಯಾಲಯಕ್ಕೆ ರಕ್ಷಿತ್ ಶೆಟ್ಟಿ ಹಾಜರಾದರು. ಶ್ಯೂರಿಟಿ ಪಡೆದು ನ್ಯಾಯಾಲಯು ಜಾಮೀನು ನೀಡಿತು. ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.