ADVERTISEMENT

ಮದುವೆ ಕುರಿತು ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2022, 5:47 IST
Last Updated 5 ಜನವರಿ 2022, 5:47 IST
ರಾಕುಲ್ ಪ್ರೀತ್ ಸಿಂಗ್
ರಾಕುಲ್ ಪ್ರೀತ್ ಸಿಂಗ್   

ನಟ ಹಾಗೂ ಚಿತ್ರನಿರ್ಮಾಪಕಜಕ್ಕಿ ಬಗ್‌ನಾನಿಯೊಂದಿಗೆನಟಿ ರಾಕುಲ್ ಪ್ರೀತ್ ಸಿಂಗ್ ಡೇಟಿಂಗ್‌ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಬ್ಬರ ಮದುವೆಕುರಿತ ಗಾಸಿಪ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇವೆ.

ಈಬಗ್ಗೆಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ರಾಕುಲ್‌, ‘ಒಂದು ವೇಳೆ ನಾನು ಮದುವೆಯಾದರೆ,ಇತರ ವಿಷಯಗಳಂತೆ ಆವಿಷಯವನ್ನೂಸಹ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಇದೀಗ, ನಾನು ನನ್ನ ವೃತ್ತಿಜೀವನದ ಮೇಲೆ ಹೆಚ್ಚುಗಮನಹರಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಸೆಲೆಬ್ರಿಟಿಗಳ ಜೀವನವು ಯಾವಾಗಲೂ ಪರೀಕ್ಷೆಗೆಒಳಪಡುತ್ತಲೇ ಇರುತ್ತದೆ.ಸುತ್ತಲಿನ ಗದ್ದಲದಿಂದ ನಾನು ಗೊಂದಲಕ್ಕೆ ಒಳಗಾಗಲು ಬಯಸುವುದಿಲ್ಲ. ಕ್ಯಾಮರಾದ ಮುಂದೆ ಕೆಲಸ ಮಾಡುತ್ತೇನೆ.ಆದರೆ,ನಾನೂ ಸಹ ವೈಯಕ್ತಿಕ ಬದುಕನ್ನು ಹೊಂದಿದ್ದೇನೆ’ ಎಂದು ರಾಕುಲ್‌ ಹೇಳಿದ್ದಾರೆ.

ADVERTISEMENT

ಕೋಲ್ಕತ್ತ ಮೂಲದ 36 ವರ್ಷದ ಜಕ್ಕಿ ಬಗ್‌ನಾನಿ ಬಾಲಿವುಡ್‌ ನಟ ಹಾಗೂ ನಿರ್ಮಾಪಕ. 2001 ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.

‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್‌ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್‌ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಹಲವುಸಿನಿಮಾಗಳನ್ನು ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.