ADVERTISEMENT

'ಆರ್ಕೆಸ್ಟ್ರಾ ಮೈಸೂರು' ಚಿತ್ರದ ಟ್ರೈಲರ್ ನೋಡಿ: ಪ್ರಧಾನಿ ಮೋದಿಗೆ ರಮ್ಯಾ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 10:40 IST
Last Updated 22 ಜೂನ್ 2022, 10:40 IST
ಮೋದಿ, ರಮ್ಯಾ
ಮೋದಿ, ರಮ್ಯಾ   

ಬೆಂಗಳೂರು: ಚಂದನವನದ ನಟಿ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ'ಆರ್ಕೆಸ್ಟ್ರಾ ಮೈಸೂರು' ಸಿನಿಮಾದ ಟ್ರೈಲರ್ ನೋಡಿ ಎಂದು ಸಲಹೆ ಮಾಡಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ಸಾಂಸ್ಕೃತಿಕ ನರ ಮೈಸೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಟ್ವೀಟ್‌ ಮಾಡಿರುವ ರಮ್ಯಾ ‘ನಿಮಗೆ ಸಮಯವಿದ್ದರೆ ಮೈಸೂರಿನಲ್ಲಿ ಮಾಡಬೇಕಾದ ಕೆಲಸಗಳ‘ ಬಗ್ಗೆ ಪಟ್ಟಿ ನೀಡಿದ್ದರು.

ಪ್ರಧಾನಿ ಮೋದಿ ಅವರಿಗೆ ಸುಸ್ವಾಗತ...ನೀವು ಮಾಡಲೇ ಬೇಕಾದ ಕೆಲಸಗಳು ಇವು...

ADVERTISEMENT

1) ರಸ್ತೆಗಳನ್ನು ಉದ್ಘಾಟನೆ ಮಾಡಿ, ಅವುಗಳ ಅವಶ್ಯಕತೆ ನಮಗೆ ತುಂಬಾ ಇದೆ. ಹೆದ್ದಾರಿ ಸಚಿವ ಗಡ್ಕರಿ ಅವರಿಗೆ ಧನ್ಯವಾದಗಳು

2) ನಮ್ಮ ಮೈಸೂರಿನ ಮೈಲಾರಿ ಬೆಣ್ಣೆ ದೋಸೆಯನ್ನು ಸವಿಯಬೇಕು.

3)'ಆರ್ಕೆಸ್ಟ್ರಾ ಮೈಸೂರು' ಸಿನಿಮಾದ ಟ್ರೈಲರ್ ನೋಡಿ... ಎಂದು ರಮ್ಯಾ ಸಲಹೆ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿರುವ ರಮ್ಯಾ ಅವರ ಈ ಟ್ವೀಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ರಮ್ಯಾ ಟ್ವೀಟ್‌ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.