ADVERTISEMENT

‘ಆ್ಯಕ್ಷನ್’ ಹಾಡಿನಲ್ಲಿ ರಾನಾ ದಗ್ಗುಬಾಟಿ ಸ್ಟೆಪ್ಸ್‌!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST
   

‘ಕತ್ತಿ ಸಂಡೈ’ ಚಿತ್ರದಲ್ಲಿ ನಟ ವಿಶಾಲ್‌ ಹಾಗೂ ತಮನ್ನಾ ಜೋಡಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಲಾಭ ಗಳಿಸಲಿಲ್ಲ. ಈಗ ಈ ಜೋಡಿಯ ಹೊಸ ಚಿತ್ರ ಸೆಟ್ಟೆರುತ್ತಿದೆ. ಇದನ್ನು ಸುಂದರ್‌ ಸಿ. ನಿರ್ದೇಶಿಸುತ್ತಿದ್ದು, ವಿಶಾಲ್‌, ತಮನ್ನಾ ನಾಯಕ, ನಾಯಕಿಯಾಗಿ ಮಿಂಚಲಿದ್ದಾರೆ.

ಈ ಹೊಸ ಚಿತ್ರಕ್ಕೆ ‘ಆ್ಯಕ್ಷನ್‌’ ಎಂದು ಹೆಸರಿಡಲಾಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನಟ ವಿಶಾಲ್‌ಗೆ ಭಾರಿ ಅಭಿಮಾನಿಗಳಿದ್ದು, ಈ ಚಿತ್ರ ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ತೆಲುಗು ಆವೃತ್ತಿಯಲ್ಲಿ ರಾನಾ ದಗ್ಗುಬಾಟಿ ಪ್ರಮುಖ ಪಾತ್ರವೊಂದಕ್ಕೆಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕೆ ಹಿಪ್‌ ಹಾಪ್‌ ಗಾಯಕ ಆದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಸಾಂಗ್‌ ಲೈಟ್ಸ್‌, ಕ್ಯಾಮೆರಾ ಆ್ಯಕ್ಷನ್‌’ ಎಂಬ ರ‍್ಯಾಪ್‌ ಹಾಡಿನಲ್ಲಿ ರಾನಾ ಕಾಣಿಸಿಕೊಳ್ಳಲಿದ್ದಾರೆ. ಹೈದಾರಾಬಾದ್‌ನಲ್ಲಿರುವ ಆದಿ ಸ್ಟುಡಿಯೊದಲ್ಲಿ ಈ ಹಾಡಿನ ಚಿತ್ರೀಕರಣದಲ್ಲಿ ರಾನಾ ದಗ್ಗುಬಾಟಿ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಣ ನಡೆಸಲಾಗಿದೆಯಂತೆ. ಈ ಫೋಟೊಗಳನ್ನು ಆದಿ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಆ್ಯಕ್ಷನ್‌’ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಹೆಚ್ಚು ಪ್ರಶಂಸೆ ಗಿಟ್ಟಿಸಿಕೊಂಡಿದೆ. ಕೆಲ ದಿನಗಳ ಕಾಲ ಈ ಟ್ರೇಲರ್‌ ಟಾಪ್‌ ಟ್ರೆಂಡಿಂಗ್‌ನಲ್ಲಿತ್ತು.

ಟ್ರೈಡೆಂಟ್‌ ಆರ್ಟ್ಸ್‌ನ ಆರ್‌. ರವೀಂದ್ರನ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ಛಾಯಾ ಸಿಂಗ್‌, ಐಶ್ವರ್ಯಾ ಲಕ್ಷ್ಮಿ, ಅಕಾಂಕ್ಷಾ ಪುರಿ, ಕಬೀರ್‌ ದುಹಾನ್ ಸಿಂಗ್‌, ಯೋಗಿ ಬಾಬು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.