
2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ರಣವೀರ್ ಸಿಂಗ್ ನಟನೆಯ ‘ಧುರಂದರ್’ ಸಿನಿಮಾ ಕೆಲ ಬದಲಾವಣೆಗಳೊಂದಿಗೆ ಇಂದಿನಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
‘ಚಿತ್ರದ ಡಿಸಿಪಿ ಬದಲಾಯಿಸಿರುವ ಬಗ್ಗೆ ಬುಧವಾರ(ಡಿ.31) ದೇಶದಾದ್ಯಂತ ಎಲ್ಲ ಚಿತ್ರಮಂದಿರಗಳಿಗೆ ವಿತರಕರು ಇ–ಮೇಲ್ ಸಂದೇಶದ ಮೂಲಕ ತಿಳಿಸಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಬಂದ ನಿರ್ದೇಶನದ ಪ್ರಕಾರ ಈ ಬದಲಾವಣೆ ಮಾಡಲಾಗಿದ್ದು, ಚಿತ್ರದಲ್ಲಿ ಎರಡು ಪದಗಳನ್ನು ಮ್ಯೂಟ್ ಮಾಡಲಾಗಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಇಂದಿನಿಂದ(ಜ.1) ಚಿತ್ರದ ಪರಿಷ್ಕೃತ ಆವೃತ್ತಿಯನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವಂತೆ ವಿನಂತಿಸಲಾಗಿದೆ ಎಂದೂ ಅದು ಹೇಳಿದೆ.
ಮ್ಯೂಟ್ ಮಾಡಲು ಹೇಳಿರುವ ಎರಡು ಪದಗಳಲ್ಲಿ ಒಂದು ‘ಬಲೂಚ್’ ಎಂದು ತಿಳಿದುಬಂದಿದೆ. ಇನ್ನೊಂದು ಪದ ಮತ್ತು ಬದಲಾಯಿಸಬೇಕೆಂದು ಕೇಳಿರುವ ಸಂಭಾಷಣೆ ಯಾವುದು ಎಂಬ ಬಗ್ಗೆ ವಿವರಗಳು ಇನ್ನೂ ತಿಳಿದುಬಂದಿಲ್ಲ.
ಆದಿತ್ಯ ಧರ್ ನಿರ್ದೇಶನದ ‘ಧುರಂದರ್’ ಡಿಸೆಂಬರ್ 5ರಂದು ಬಿಡುಗಡೆಯಾಗಿದೆ. ಇಲ್ಲಿಯವರೆಗೆ ಗಲ್ಲಾ ಪೆಟ್ಟಿಯಲ್ಲಿ ಸಾವಿರ ಕೋಟಿ ಗಳಿಕೆ ಕಂಡಿರುವ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.