ADVERTISEMENT

ಎಲ್ಲಕ್ಕೂ ಒಂದು ಮಿತಿ ಇದೆ, ನನ್ನ ಅಭಿಮಾನಿಗಳ ಬಗ್ಗೆ ಮಾತಾಡ್ಬೇಡಿ: ರಶ್ಮಿಕಾ ಗರಂ

ಮುದ್ದು ಮುಖದ ಚೆಲುವೆ ಮುಗಿಬಿದ್ದದ್ದು ಯಾಕೆ ಗೊತ್ತಾ?

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 9:42 IST
Last Updated 26 ಜನವರಿ 2019, 9:42 IST
   

‘ಎಲ್ಲದಕ್ಕೂ ಒಂದು ಮಿತಿ ಇದೆ. ಹೌದು ಕಾಮೆಂಟ್‌ ಮಾಡುವುದು ನಿಮ್ಮ ಹಕ್ಕು. ನನ್ನ ಮೇಲೆ ಕಾಮೆಂಟ್‌ ಮಾಡಿ ಅದನ್ನು ಸ್ವೀಕರಿಸುತ್ತೇನೆ. ಆದರೆ ನನ್ನ ಅಭಿಮಾನಿಗಳ ವಿಚಾರದಲ್ಲಿ ನಿಮಗೆ ಆ ಹಕ್ಕು ಇಲ್ಲ. ಈ ಸಂದೇಶ ಕೇವಲ ಈ ವ್ಯಕ್ತಿಗಳಿಗೆ ಮಾತ್ರವಲ್ಲ. ಬದಲಾಗಿ ನನ್ನ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಎಲ್ಲರಿಗೂ!’

ಟ್ವಿಟರ್‌ನಲ್ಲಿ ಈ ರೀತಿ ಗರಂ ಸಂದೇಶ ಹರಿಬಿಟ್ಟವರು ಚಂದನವನದ ಅಂದಗಾತಿ ರಶ್ಮಿಕಾ ಮಂದಣ್ಣ.

**

ADVERTISEMENT

ರಶ್ಮಿಕಾ ಮಂದಣ್ಣ ಕರ್ನಾಟಕ ಫ್ಯಾನ್ಸ್‌ ಕ್ಲಬ್‌, ‘ಯುಟ್ಯೂಬ್‌ ಕ್ವೀನ್‌’ ಒಕ್ಕಣೆಯೊಂದಿಗೆರಶ್ಮಿಕಾ ಮಂದಣ್ಣ ಅವರ ಚಿತ್ರವೊಂದನ್ನು ಶುಕ್ರವಾರ ಪ್ರಕಟಿಸಿತ್ತು. ಆ ಚಿತ್ರದ ಮೇಲೆ 'ತನ್ನ ಎರಡು ವಿಡಿಯೊ ಸಾಂಗ್‌ಗಳಿಗೆ 5ಕೋಟಿ ಬಾರಿಹಾಗೂ ತೆಲುಗಿನಒಂದು ಹಾಡಿಗೆ 10ಕೋಟಿ ಸಲ ವೀಕ್ಷಣೆ ಪಡೆದ ಕನ್ನಡದ ಏಕಮಾತ್ರ ನಟಿ ರಶ್ಮಿಕಾ ಮಂದಣ್ಣ’ ಎಂದೂ ಬರೆಯಲಾಗಿದೆ.

ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ಸಬರ್‌ ಎಂಬಾತ, ‘ಹಲೋ ಬಾಸ್‌, ಕ್ವೀನ್‌ ಆಫ್‌ಯೂಟ್ಯೂಬ್‌ ಎಂಬುದು ಅತಿದೊಡ್ಡ ಜೋಕ್‌. ಆಕೆ ಕೇವಲ ತನ್ನ ಅಭಿಮಾನಿ ಪುಟದಲ್ಲಿ ಮಾತ್ರವೇ ರಾಣಿ. ಅದರ ಹೊರತಾಗಿ ಯಾರೊಬ್ಬರೂ ಆಕೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ಯುಟ್ಯೂಬ್‌ನವರು ಈ ಸಂದೇಶ ನೋಡಿದರೆ ಹುಚ್ಚರಂತೆ ನಕ್ಕುಬಿಡುತ್ತಾರೆ. ಈ ಹುಡುಗಿಗಾಗಿ ನಿಮ್ಮ ಸಮಯವನ್ನೇಕೆ ಹಾಳುಮಾಡಿಕೊಳ್ಳುತ್ತೀರಿ ಹೋಗಿ ಕೆಲಸ ನೋಡಿ’ ಎಂದು ಕಾಲೆಳೆದಿದ್ದ.

ಇದನ್ನು ಲಘವಾಗಿಯೇ ತೆಗೆದುಕೊಂಡ ಪುಟ ನಿರ್ವಹಣೆಕಾರರು, ‘ದಾಖಲೆ ಇಲ್ಲದೆ ಮಾತನಾಡಲು ನಾವೇನು ನೀನಲ್ಲ. ಕಾಮೆಂಟ್‌ ಮಾಡುವ ಮುನ್ನ ತಿಳಿದುಕೊ ಎಂದಷ್ಟೇ ಹೇಳಿ’ ಸುಮ್ಮನಾಗಿದ್ದರು. ಆದರೆ ಸಬರ್, ಯುಟ್ಯೂಬ್‌ ಕ್ವೀನ್‌ ಎನ್ನಲು ನಿಮ್ಮ ಬಳಿ ಪುರಾವೆ ಏನಿದೆ ಎಂದು ಪ್ರಶ್ನಿಸಿದ್ದ.

ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ರಾಣಿ ರಶ್ಮಿಕಾ,‘ಸರ್‌ ನೀವು ನನ್ನ ಬಗ್ಗೆ ಏನು ಬೇಕಾದರು ಹೇಳಿ. ನನ್ನ ಅಭಿಮಾನಿಗಳ ಬಗ್ಗೆ ಮಾತನಾಡಬೇಡಿ. ಅಯ್ಯೋ ದೇವ!! ಈ ರೀತಿಯಲ್ಲಿ ನಾನೂ ನನ್ನ ಸಮಯವನ್ನು ಹಾಳು ಮಾಡುವಂತೆನೀವು ಮಾಡುತ್ತಿದ್ದೀರಿ’ ಎಂದು ಕಣ್ಣು ಕೆಂಪಾಗಿಸಿದ್ದಾರೆ. ಅಷ್ಟರಲ್ಲಿ ರಶ್ಮಿಕಾ ಅಭಿಮಾನಿಗಳು ಯುಟ್ಯೂಬ್‌ನಲ್ಲಿ ಭಾರಿ ವೀಕ್ಷಣೆ ಪಡೆದಿರುವ ರಶ್ಮಿಕಾರವಿಡಿಯೊಗಳ ತುಣುಕುಗಳನ್ನು ಪ್ರಕಟಿಸಿ, ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

ಚರ್ಚೆ ಕಾವೇರುತ್ತಿದ್ದಂತೆ ಮತ್ತೆ ಬಂದ ರಶ್ಮಿಕಾ, ಸುದ್ದಿಯ ಆರಂಭದಲ್ಲೇ ಉಲ್ಲೇಖಸಿರುವ ಪೋಸ್ಟ್‌ ಅನ್ನುಈ ವೇಳೆ ಹಾಕಿದ್ದಾರೆ. ಮುಂದುವರಿದು ‘ನಮ್ಮ ಕೆಲಸ ನಿಮಗೆ ಇಷ್ಟವಾಗದಿದ್ದರೆ ಬೇಡ. ನಮ್ಮ ಸಮಯವನ್ನು ಹಾಳು ಮಾಡಿ ನೀವೂ ಸಮಯ ಹಾಳುಮಾಡಿಕೊಳ್ಳಬೇಡಿ’ ಎಂದು ಮನವಿ ಮಾಡಿದ್ದಾರೆ.

‘ಮತ್ತೆ ಮತ್ತೆ ಸಮಯ ಹಾಳು ಮಾಡಬೇಡಿ’ ಎಂದದ್ದನ್ನು ಉಲ್ಲೇಖಿಸಿರುವ ಮತ್ತೊಬ್ಬ, ‘ನೀವು ಏಳು ಸಾಲುಗಳ ಕಾಮೆಂಟ್‌ ಮಾಡಿದ್ದೀರಿ. ಪ್ರತಿ ಸಾಲನ್ನು ಟೈಪ್‌ ಮಾಡಲು ಸರಾಸರಿ 15 ಸೆಕೆಂಡ್‌ಗಳಾದರೂ ಬೇಕು. ಅರ್ಥಾತ್‌ 105 ಸೆಕೆಂಡ್‌ ಬೇಕು. ಇದರರ್ಥ ನೀವು ಇಂತಹವರಿಗೆ ಪ್ರತಿಕ್ರಿಯಿಸುವ ಸಲುವಾಗಿ 1.45 ನಿಮಿಷವನ್ನು ಯಶಸ್ವಿಯಾಗಿ ಹಾಳು ಮಾಡಿದ್ದೀರಿ’ ಎಂದು ಕಾಲೆಳೆದಿದ್ದಾನೆ.

ರಶ್ಮಿಕಾ ತಮ್ಮ ಅಭಿಮಾನಿಗಳ ಬಗ್ಗೆ ಕಾಳಜಿ ತೋರಿದ್ದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಕ್ವೀನ್‌ಗೆಯಾವಾಗಲೂ ಬೆಂಬಲ ನೀಡುವುದಾಗಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ನಿಮ್ಮ ಕಾಳಜಿ ಸಂದೇಶ ‘ನೀವು ಅಂದುಕೊಂಡಷ್ಟೇನು ವೈರಲ್‌ ಆಗುವುದಿಲ್ಲ ಬಿಡಿ’ ಎಂದು ಕಿಚಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.