ADVERTISEMENT

ರವಿಚಂದ್ರನ್‌ @59: ಕನಸುಗಳ ಸಾಹುಕಾರನಿಗೆ ಜನ್ಮದಿನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಮೇ 2020, 7:33 IST
Last Updated 30 ಮೇ 2020, 7:33 IST
   

ಬೆಂಗಳೂರು: ಚಂದನವನದ ಕನಸುಗಾರ ಎಂದೇ ಖ್ಯಾತಿರಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್‌ ಅವರಿಗೆ ಇಂದು (ಮೇ 30) 59ನೇ ವರ್ಷದ ಜನ್ಮದಿನದ ಸಂಭ್ರಮ.

ಕೊರೊನಾ ವೈರಸ್‌ ಸಂಕಷ್ಟದ ಹಿನ್ನೆಲೆಯಲ್ಲಿ ರವಿಚಂದ್ರನ್‌ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅಭಿಮಾನಿಗಳಿಗೆ ಮನೆ ಮುಂದೆ ಬಂದು ಸೇರುವುದು ಬೇಡ ಎಂದು ಹೇಳಿದ್ದರು.

59ನೇ ವಸಂತಕ್ಕೆ ಕಾಲಿಟ್ಟಿರುವ ರವಿಮಾಮನಿಗೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.

ADVERTISEMENT

ಲಾಕ್‌ಡೌನ್‌ ಸಮಯದಲ್ಲಿ ರವಿಚಂದ್ರನ್‌ ಮೂರು ಸ್ಕ್ರಿಪ್ಟ್‌ಗಳನ್ನು ತಯಾರಿಸಿ ಎದ್ದಾರೆ ಎನ್ನಲಾಗಿದೆ. ಒಂದರಲ್ಲಿ ಮಗ ವಿಕ್ರಮ್‌ ಜೊತೆ ನಟಿಸಲಿದ್ದಾರೆ. ಲಾಕ್‌ಡೌನ್‌ ಸಂಪೂರ್ಣವಾಗಿ ತೆರೆವಾದ ಬಳಿಕ ಈ ಬಗ್ಗೆ ಮಾಹಿತಿ ನೀಡುವುದಾಗಿ ರವಿಚಂದ್ರನ್‌ ಹೇಳಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.