ADVERTISEMENT

ನಟಿ ರೇಖಾ ನಿವಾಸದಸೆಕ್ಯೂರಿಟಿ ಗಾರ್ಡ್‌ಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 11:52 IST
Last Updated 12 ಜುಲೈ 2020, 11:52 IST
ರೇಖಾ
ರೇಖಾ   

ಬಾಲಿವುಡ್ ಚಿರಯೌವ್ವನೆ, ಹಿರಿಯ ನಟಿ ರೇಖಾ ಅವರ ಮುಂಬೈ ನಿವಾಸದ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನ ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಡುತ್ತಲೇ ಬೃಹನ್‌ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಸಿಬ್ಬಂದಿಯು ನಟಿ ರೇಖಾ ನಿವಾಸದ ಸೆಕ್ಯೂರಿಟಿ ಗಾರ್ಡ್‌ನನ್ನು ಬಾಂದ್ರಾ ಕೋವಿಡ್‌ ಆಸ್ಪತ್ರೆಗೆ ಸೇರಿಸಿದ್ದಾರೆ. ರೇಖಾ ನಿವಾಸದ ಎಲ್ಲ ಸಿಬ್ಬಂದಿಯ ಜತೆಗೆ ಪಕ್ಕದಲ್ಲಿರುವ ಜಾವೇದ್‌ ಅಖ್ತರ್ ನಿವಾಸದ ಎಲ್ಲ ಸಿಬ್ಬಂದಿಯನ್ನೂ ಕೋವಿಡ್‌–19 ಪರೀಕ್ಷೆಗೆ ಕರೆದೊಯ್ದಿದ್ದಾರೆ.

ಪಾಲಿಕೆಯ ಆರೋಗ್ಯ ಸಿಬ್ಬಂದಿ ಕೋವಿಡ್‌–19 ಪರೀಕ್ಷೆಗೆ ಒಳಗಾಗುವಂತೆ ನಟಿ ರೇಖಾ ಅವರಿಗೂ ಮನವಿ ಮಾಡಿದರು. ಅವರ ಮನವಿಯನ್ನು ನಿರಾಕರಿಸಿದ ರೇಖಾ, ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ, ವರದಿ ಸಲ್ಲಿಸುವುದಾಗಿ ತಿಳಿಸಿದರು ಎಂದು ಹೇಳಲಾಗಿದೆ.

ADVERTISEMENT

ಮುಂಬೈ ಪಾಲಿಕೆಯ ಸಿಬ್ಬಂದಿಯು ರೇಖಾ ಅವರ ನಿವಾಸವನ್ನುಸೀಲ್‌ಡೌನ್‌ ಮಾಡಿಲ್ಲ. ಆದರೆ, ಅವರ ಮನೆಯ ಕಂಪೌಂಡ್‌ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ವಾಸಿಸುತ್ತಿದ್ದ ಜೋಪಡಿಯನ್ನು ಮಾತ್ರ ಸೀಲ್‌ಡೌನ್‌ ಮಾಡಿದ್ದಾರೆ.

ಇದಕ್ಕೂ ಮೊದಲು ಕರಣ್‌ ಜೋಹರ್‌ ಮತ್ತು ಜಾಹ್ನವಿ ಕಪೂರ್‌ ಆಪ್ತ ಸಹಾಯಕ ಸಿಬ್ಬಂದಿಗೂ ಸೋಂಕು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.