ADVERTISEMENT

ಸೋತಾಗ ಸಂಗಾತಿ ಮದ್ದು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 12:25 IST
Last Updated 3 ಏಪ್ರಿಲ್ 2019, 12:25 IST
ರಿಚಾ ಚಡ್ಡಾ
ರಿಚಾ ಚಡ್ಡಾ   

ರಿಚಾ ಚಡ್ಡಾ... ’ಶಕೀಲಾ‘ ಚಿತ್ರದಲ್ಲಿಮಲಯಾಳಂ ಚಿತ್ರರಂಗದ ವಿವಾದಿತ ನಟಿ ಶಕೀಲಾ ಪಾತ್ರ ಮಾಡಿರುವ ಬೋಲ್ಡ್‌ ನಟಿ. ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಖುಷಿಯಲ್ಲಿದ್ಧಾರೆ ಅವರು. ಅದೇ ಖುಷಿಯಲ್ಲಿ ರಿಚಾ ಕೆಲವು ಖಾಸ್‌ಬಾತ್‌ಗಳನ್ನು ಹಂಚಿಕೊಂಡಿದ್ದಾರೆ.

ರಿಚಾಗೆ ಒಬ್ಬ ಬಾಯ್‌ಫ್ರೆಂಡ್‌ ಇದ್ದಾರೆ. ಹೆಸರು ಅಲಿ ಫಜಲ್‌. ಅವರ ಪಾಲಿಗೆ ಈ ಯುವಕ ಅನರ್ಘ್ಯ ರತ್ನವಂತೆ! ಯಾವುದಾದರೂ ಕಾರಣಕ್ಕೆ ಮನಸ್ಸು ಕಿರಿಕಿರಿ, ಗೊಂದಲಕ್ಕೆ ಒಳಗಾದರೆ, ಸಮಸ್ಯೆ ಎದುರಾದರೆ ರಿಚಾ ತನ್ನ ಗೆಳೆಯನ ಮೊರೆ ಹೋಗುತ್ತಾರೆ.

ನಟಿಯಾಗಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಪಾಠ ಕಲಿತಿದ್ದರೂ ಗೆಳೆಯನ ಸಾಂಗತ್ಯದಲ್ಲಿ ಸಮಸ್ಯೆಗಳು ಸಲೀಸಾಗಿ ಬಗೆಹರಿಯುತ್ತವೆ ಎಂಬುದು ಬದುಕು ಕಲಿಸಿದ ಸತ್ಯವಂತೆ!

ADVERTISEMENT

ದಿಬಾಕರ್‌ ಬ್ಯಾನರ್ಜಿ ಅವರ ’ಓಯೆ ಲಕ್ಕಿ ಲಕ್ಕಿ ಓಯೆ‘ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ರಿಚಾ, ಅದರ ಯಶಸ್ಸಿನಿಂದ ಚಿತ್ರರಂಗದ ಗಮನ ಸೆಳೆದರು. ಅದಾದ ಬೆನ್ನಿಗೆ ’ಮಸಾನ್‌‘, ‘ಗ್ಯಾಂಗ್ಸ್‌ ಆಫ್‌ ವಸೀಪುರ್‘ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಹೀಗೆ ಗೆದ್ದಾಗಿನ ಖುಷಿಗೂ, ಸೋತಾಗಿನ ಬೇಸರಕ್ಕೂ ಗೆಳೆಯನೇ ಮದ್ದು ಎನ್ನುತ್ತಾರೆ ಈ ಬೆಡಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.