ADVERTISEMENT

‘ರಾಮನ ಅವತಾರ’ ಸಿನಿಮಾ ರಿಷಿಗೆ ಪ್ರಣೀತಾ ಜೋಡಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 19:45 IST
Last Updated 24 ಜುಲೈ 2023, 19:45 IST
ಪ್ರಣೀತಾ 
ಪ್ರಣೀತಾ    

ನಟ ರಿಷಿ, ತನ್ನ ನಟನೆ ಹಾಗೂ ವಿಭಿನ್ನ ಸಿನಿಮಾಗಳ ಆಯ್ಕೆಗಳಿಂದಲೇ ಕನ್ನಡದ ಪ್ರೇಕ್ಷಕರನ್ನು ಸೆಳೆದಿರುವವರು. ಹಾಸ್ಯ ಪ್ರಧಾನ ಚಿತ್ರಗಳಷ್ಟೇ ಅಲ್ಲದೆ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆಗಳಲ್ಲೂ ತಮ್ಮ ನಟನೆಯ ಸಾಮರ್ಥ್ಯ ಪ್ರದರ್ಶಿಸಿರುವ ರಿಷಿ, ‘ಶೈತಾನ್‌’ ಎಂಬ ವೆಬ್‌ಸಿರೀಸ್‌ನಲ್ಲಿ ರಗಡ್ ಆಗಿಯೂ ಕಾಣಿಸಿಕೊಂಡವರು. ಇದೀಗ ಮತ್ತೆ ಸಿನಿಮಾದತ್ತ ಹೆಜ್ಜೆ ಹಾಕಿರುವ ರಿಷಿ, ‘ರಾಮನ ಅವತಾರ’ ಸಿನಿಮಾ ಮೂಲಕ ಲವರ್ ಬಾಯ್ ಆಗಿ ಪ್ರತ್ಯಕ್ಷರಾಗಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾದ ‘ರಾಮ ಈಸ್ ಜೆಂಟಲ್ ಮೆನ್’ ಎಂಬ ಹಾಡು ಬಿಡುಗಡೆಯಾಗಿತ್ತು. ಇದೀಗ ಎರಡನೇ ಹಾಡು ರಿಲೀಸ್‌ ಆಗಿದೆ. ‘ಮನಸು ಬೇರೆಯ ದಿಕ್ಕಲಿ ಸಾಗಲು’ ಎಂಬ ಹಾಡಿಗೆ ಸಂಚಿತ್‌ ಧ್ವನಿಯಾಗಿದ್ದಾರೆ. ಸಿಂಪಲ್ ಸುನಿ ಸಾಹಿತ್ಯದ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಉಡುಪಿಯ ಸಮುದ್ರ ತೀರದಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ. ಈ ಪ್ರೇಮಗೀತೆಯಲ್ಲಿ ರಿಷಿ ಹಾಗೂ ಪ್ರಣೀತಾ ಜೋಡಿ ಕಾಣಿಸಿಕೊಂಡಿದೆ. 

‘ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ನಾಟಿ ಫ್ಯಾಕ್ಟರಿ’ ಖ್ಯಾತಿಯ ವಿಕಾಸ್ ಪಂಪಾಪತಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾ. 

ADVERTISEMENT

ಸ್ಟಾರ್ ಫ್ಯಾಬ್ ಪ್ರೊಡಕ್ಷನ್‌ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಕಾಣಲಿದೆ. 

ರಿಷಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.