ನಿರ್ದೇಶಕ ಸಿಂಪಲ್ ಸುನಿ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ದಿನ ಅವರ ಅಭಿಮಾನಿಗಳಿಗೆ ಖುಷಿ ಸುದ್ದಿಯೂ ಸಿಕ್ಕಿದೆ. 2021ರ ಸಾಲಿಗೆ ಭರ್ಜರಿಯಾದ ಪ್ರಾಜೆಕ್ಟ್ವೊಂದನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಸುನಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಸಾರಥ್ಯದಲ್ಲಿ ಹೊಸ ಚಿತ್ರ ಮೂಡಿಬರಲಿದೆ. ಚಿತ್ರದ ಹೆಸರು ‘ರಾಬಿನ್ಹುಡ್’. ಈ ಚಿತ್ರ ಬರುವ ಫೆಬ್ರುವರಿ ಅಥವಾ ಮಾರ್ಚ್ನಲ್ಲಿ ಸೆಟ್ಟೇರಲಿದೆ. ಚಿತ್ರದ ಫಸ್ಟ್ಲುಕ್ ಎನ್ನುವಂತೆ ಶೀರ್ಷಿಕೆಯ ಆಕರ್ಷಕ ಪೋಸ್ಟರ್ ಅನ್ನು ಈ ಇಬ್ಬರು ಹಂಚಿಕೊಂಡಿದ್ದಾರೆ.
ಚಿತ್ರದ ಕಥೆ– ಚಿತ್ರಕಥೆಯೂ ಸಿದ್ಧವಾಗಿದ್ದು, ಇದೊಂದು ಸಾಹಸ ಪ್ರಧಾನ ಕಥಾಹಂದರವೊಂದಿರಲಿದೆ. ಇಡೀ ಕುಟುಂಬ ನೋಡಿ ಖುಷಿ ಪಡುವಂತಹ ಭರಪೂರ ಮನರಂಜನೆ ಒದಗಿಸುವ ಎಲ್ಲ ಅಂಶಗಳು ಈ ಚಿತ್ರದಲ್ಲಿ ಮಿಳಿತವಾಗಿರಲಿವೆಯಂತೆ. ಈ ಚಿತ್ರದ ನಾಯಕ ಮತ್ತು ನಾಯಕಿ ಪಾತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸುವುದುಸುನಿ ಮತ್ತು ಪುಷ್ಕರ್ ಯೋಜನೆಯೂ ಆಗಿದೆಯಂತೆ.ದುಷ್ಯಂತ್ ಎಂಬ ಹೊಸ ನಟನಾಯಕನಾಗಿ ಈ ಚಿತ್ರದಲ್ಲಿ ಬಣ್ಣ ಹಚ್ಚಲಿರುವ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಲಿದ್ದಾರೆ. ನಾಯಕಿಗಾಗಿ ಇನ್ನು ಹುಡುಕಾಟ ನಡೆಯುತ್ತಿದೆಯಂತೆ.
ಸದ್ಯ ಸುನಿ ಅವರು ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿ ಮತ್ತೊಮ್ಮೆ ಜತೆಯಾಗಿರುವ ‘ಅವತಾರಪುರುಷ’ ಚಿತ್ರ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಸಖತ್’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಎರಡು ಚಿತ್ರಗಳ ಕೆಲಸಗಳನ್ನು ಪೂರ್ಣಗೊಳಿಸಿ ಹೊಸ ಚಿತ್ರವನ್ನು ಸುನಿ ಕೈಗೆತ್ತಿಕೊಳ್ಳಲಿದ್ದಾರೆ. ಈ ನಡುವೆಗಣೇಶ್ ಮತ್ತು ಸುನಿ ಕಾಂಬಿನೇಷನ್ನಲ್ಲಿ ಡಾರ್ಕ್ ಹ್ಯೂಮರಸ್ ಕಥೆಯ ಹೊಸ ಚಿತ್ರ ‘ದ ಸ್ಟೋರಿ ಆಫ್ ರಾಯಗಢ’ ಘೋಷಣೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.