
ಪ್ರಜಾವಾಣಿ ವಾರ್ತೆ
ಉಡುಪಿ: ಚಿತ್ರನಟ ಯಶ್ ಭಾನುವಾರ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಯಶ್‌ರನ್ನು ನೋಡಲು ಅಭಿಮಾನಿಗಳ ದಂಡು ನೆರೆದಿತ್ತು. ರಥಬೀದಿಯಲ್ಲಿ ಹಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಮೊದಲು ಕನಕನ ಕಿಂಡಿಯಲ್ಲಿ ದೇವರ ದರ್ಶನ ಪಡೆದ ಯಶ್ ಬಳಿಕ ಗರ್ಭಗುಡಿ ಎದುರಿಗಿರುವ ನವಗ್ರಹ ಕಿಂಡಿಗಳ ಮೂಲಕ ದೇವರ ದರ್ಶನ ಮಾಡಿದರು.
ಬಳಿಕ ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಆಚಾರ್ ಅವರು ಪ್ರಸಾದ ನೀಡಿದರು. ಕೃಷ್ಣಾಪುರ ಮಠಕ್ಖೂ ಭೇಟಿನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.