ADVERTISEMENT

Kannda Movies | ಹೊಸಬರ ‘ಆರ್‌ಪಿ’

​ಪ್ರಜಾವಾಣಿ ವಾರ್ತೆ
Published 8 ಮೇ 2025, 0:30 IST
Last Updated 8 ಮೇ 2025, 0:30 IST
ಶ್ರೀನಿಧಿ
ಶ್ರೀನಿಧಿ   

ಬಹುತೇಕ ಹೊಸಬರಿಂದಲೇ ಕೂಡಿರುವ ‘ಆರ್‌ಪಿ’ ಚಿತ್ರದ ಮೋಷನ್ ಪೋಸ್ಟರ್ ಮತ್ತು ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಕಬ್ಬಾಳಮ್ಮ ಕ್ರಿಯೇಶನ್ ಅಡಿಯಲ್ಲಿ ಯುವರಾಜ್.ಎಸ್ ಸಿನಿಮಾವನ್ನು ನಿರ್ಮಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಬ್ಲಾಕ್ ಅಂಡ್ ವೈಟ್’ ಎಂಬ ಅಡಿಬರಹ ಈ ಚಿತ್ರಕ್ಕಿದೆ. 

‘ಗೆಳೆಯರೊಬ್ಬರ ಜೀವನದಲ್ಲಿ ನಡೆದ, ನಡೆಯುತ್ತಿರುವ ಒಂದಷ್ಟು ಘಟನೆಗಳಿಂದ ಚಿತ್ರಕಥೆ ಸಿದ್ದಪಡಿಸಲಾಗಿದೆ. ಅದಕ್ಕಾಗಿ ಆರ್‌ಪಿ ಎಂಬುದಾಗಿ ಶೀರ್ಷಿಕೆ ಇಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಕೃತಿ ನಾಶವಾಗುತ್ತಿದ್ದರೂ ಅದನ್ನು ನಾವು ಮರೆಯುತ್ತಿದ್ದೇವೆ. ಆ ಬಗ್ಗೆ ಅರಿವು ಮೂಡಿಸುವ ಚಿತ್ರವಿದು’ ಎಂದರು ನಿರ್ದೇಶಕರು.

ನಾಯಕ ರಾಘವೇಂದ್ರ ಪ್ರಸಾದ್‌ಗೆ ಶ್ರೀನಿಧಿ ಜೋಡಿಯಾಗಿದ್ದಾರೆ. ಲಯ ಕೋಕಿಲ, ಬಾಲನಟರಾದ ನಿಖಿಲ್.ಆರ್. ಮತ್ತು ದಕ್ಷಿತ್‌ಗೌಡ ತಾರಾಗಣದಲ್ಲಿದ್ದಾರೆ. ಆದಿಚುಂಚನಗಿರಿ ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡ ಯೋಜನೆ ರೂಪಿಸಿಕೊಂಡಿದೆ. ನಾಗಶೆಟ್ಟಿ ಮಾಳಗಿ ಛಾಯಾಚಿತ್ರಗ್ರಹಣ, ಮುತ್ತುರಾಜ್‌ ಸಂಕಲನ ಚಿತ್ರಕ್ಕಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.