ADVERTISEMENT

ಮೇ 20ಕ್ಕೆ ಜೀ5ನಲ್ಲಿ ಆರ್‌ಆರ್‌ಆರ್‌

​ಪ್ರಜಾವಾಣಿ ವಾರ್ತೆ
Published 13 ಮೇ 2022, 9:32 IST
Last Updated 13 ಮೇ 2022, 9:32 IST
   

ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳಿಗೆ ಈ ವರ್ಷ ಡಬಲ್‌ ಧಮಾಕ. ಮೇ 20ರಂದು ಜೂನಿಯರ್‌ ಎನ್‌ಟಿಆರ್‌ ಜನ್ಮದಿನ. ಅದೇ ದಿನ ಅವರ ನಟನೆಯ, ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ರೌದ್ರ–ರಣ–ರುಧಿರ’(ಆರ್‌ಆರ್‌ಆರ್‌) ಒಟಿಟಿ ವೇದಿಕೆ ಜೀ5ನಲ್ಲಿ ಬಿಡುಗಡೆಯಾಗಲಿದೆ.

ಮಾರ್ಚ್‌ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಆರ್‌ಆರ್‌ಆರ್‌ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಚಿತ್ರವು ಇಲ್ಲಿಯವರೆಗೆ ₹1,100 ಕೋಟಿ ಬಾಚಿದ್ದು, ರಾಮ್-ಭೀಮ್ ಪವರ್‌ಫುಲ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.ಐವತ್ತು ದಿನ ಪೂರೈಸಿದ ಸಂಭ್ರಮದಲ್ಲೇ ಒಟಿಟಿ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಿಸಿದೆ.

ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ಸ್ವತಃ ಜೂನಿಯರ್ ಎನ್‌ಟಿಆರ್‌ ಹಾಗೂ ರಾಮ್‌ಚರಣ್ ಡಬ್ ಮಾಡಿದ್ದರು. ಇದೀಗ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ ಹೊಸ ಟ್ರೇಲರ್‌ ಅನ್ನು ನಟ ಶಿವರಾಜ್‌ಕುಮಾರ್‌ ಅನಾವರಣಗೊಳಿಸಿದ್ದಾರೆ. 4ಕೆ ಕ್ವಾಲಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡವು ತಿಳಿಸಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.