ADVERTISEMENT

ಹಿಂದಿ ಡಬ್ಬಿಂಗ್‌ಗೆ ಪ್ರಭಾಸ್ ದನಿ

ಸಾಹೊ ಸಿನಿಮಾದ ಹಿಂದಿ ಡಬ್ಬಿಂಗ್‌ನಲ್ಲಿ ಪ್ರಭಾಸ್ ದನಿ

​ಪ್ರಜಾವಾಣಿ ವಾರ್ತೆ
Published 16 ಮೇ 2019, 2:52 IST
Last Updated 16 ಮೇ 2019, 2:52 IST
ಪ್ರಭಾಸ್
ಪ್ರಭಾಸ್   

‘ಬಾಹುಬಲಿ’ ಚಿತ್ರದ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದ ನಟ ಪ್ರಭಾಸ್, ‘ಸಾಹೊ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸುಜಿತ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಪ್ರಭಾಸ್‌ಗೆ ನಾಯಕಿಯಾಗಿದ್ದಾರೆ. ಈ ಸಿನಿಮಾ ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಲಿರುವ ಪ್ರಭಾಸ್, ಹಿಂದಿಯಲ್ಲಿ ಮೂಡಿಬರಲಿರುವ ‘ಸಾಹೊ’ದಲ್ಲಿನ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಲಿದ್ದಾರಂತೆ. ಇದಕ್ಕಾಗಿ ಹಿಂದಿಯನ್ನು ಕಲಿಯುತ್ತಿರುವ ಪ್ರಭಾಸ್, ಪಕ್ಕಾ ಹೋಮ್‌ ವರ್ಕ್ ಮಾಡಿಕೊಂಡೇ ಡಬ್ಬಿಂಗ್ ಮಾಡಲಿದ್ದಾರೆಂದು ಚಿತ್ರತಂಡ ಹೇಳಿದೆ.

‘ಸಾಹೊ’ ಶೇ 80ರಷ್ಟು ಚಿತ್ರೀಕರಣ ಪೂರೈಸಿದ್ದು, ಪ್ರಭಾಸ್ ಅವರ ದನಿಯಲ್ಲಿ ಹಿಂದಿ ಭಾಷೆ ಹೇಗೆ ಮೂಡಿಬರಬಹುದು ಎಂಬ ನಿರೀಕ್ಷೆ ಪ್ರೇಕ್ಷಕರದ್ದು. ಸಾಹೊ ಆಗಸ್ಟ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.