ADVERTISEMENT

ಸಾಯಿಪಲ್ಲವಿ ತುಂಬಾ ಚೂಸಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 19:45 IST
Last Updated 3 ಜುಲೈ 2019, 19:45 IST
   

‘ಫಿದಾ’ ಹಾಗೂ ‘ಮಾರಿ2’ ಚಿತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡವರು ಸಾಯಿಪಲ್ಲವಿ. ಈ ಎರಡೂ ಚಿತ್ರದ ನಟನೆಗೂ ಉತ್ತಮ ವಿಮರ್ಶೆ ಹಾಗೂ ಪ್ರಶಂಸೆ ವ್ಯಕ್ತವಾಗಿದ್ದರೂ ಸಾಯಿಪಲ್ಲವಿ ಬಿಗ್‌ ಬಜೆಟ್‌ ಸಿನಿಮಾ ಅಥವಾ ಸ್ಟಾರ್‌ ನಟರೊಂದಿಗೆ ನಟಿಸಿಲ್ಲ.

‘ಪ್ರೇಮಂ’ ಚಿತ್ರದಲ್ಲಿ ಮುದ್ದು ಮುಖ ಹಾಗೂನಟನೆಯಿಂದ ಮನಗೆದ್ದವರು ಸಾಯಿಪಲ್ಲವಿ. ಆ ಸಿನಿಮಾವು ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದ್ದರಿಂದ ಅವರಿಗೆ ತಮಿಳು ಹಾಗೂ ತೆಲುಗು ಸಿನಿಮಾದಿಂದ ಸಾಲು ಸಾಲು ಅವಕಾಶಗಳು ಬರತೊಡಗಿದವು. ಸಿನಿಕ್ಷೇತ್ರಕ್ಕೆ ಬಂದ ಸ್ವಲ್ಪ ಸಮಯದಲ್ಲಿಯೇ ಸ್ಟಾರ್‌ ನಟಿಯರ ಸಾಲಿನಲ್ಲಿ ಅವರು ಗುರುತಿಸಿಕೊಂಡರು.

ತೆಲುಗು ಹಾಗೂ ತಮಿಳಿನಲ್ಲಿ ನಟಿಸಿದ ಚಿತ್ರಗಳು ಹಿಟ್‌ ಆದರೂ ಅವರಿಗೆ ಸ್ಟಾರ್‌ ನಟರ ಜೊತೆ ನಟಿಸಿಲ್ಲ. ಇದಕ್ಕೆ ಕಾರಣ ಅವರದು ಪಕ್ಕದ್ಮನೆ ಹುಡುಗಿಯಂತಹ ಇಮೇಜ್‌ ಎಂದು ಇಂಡಸ್ಟ್ರಿಯಲ್ಲಿ ಮಾತು ಕೇಳಿಬರುತ್ತಿದೆ. ಟಾಲಿವುಡ್‌, ಕಾಲಿವುಡ್‌ನ ಬಿಗ್‌ ಬಜೆಟ್‌ ಮೂವಿಗಳಲ್ಲಿ ನಿರ್ದೇಶಕರು ಸಾಮಾನ್ಯವಾಗಿ ಗ್ಲಾಮರಸ್‌ ನಾಯಕಿಯರನ್ನು ಆಯ್ಕೆ ಮಾಡುತ್ತಾರೆ. ಸಾಯಿಪಲ್ಲವಿ ಅವರಿಗೆ ಅಂತಹ ಪಾತ್ರಗಳನ್ನು ಮಾಡಲು ಮನಸ್ಸಿಲ್ಲ, ಹಾಗೇ ನಟನೆಗೆ ಹೆಚ್ಚು ಮಹತ್ವವಿರುವ ಪಾತ್ರಗಳಲ್ಲಿ ನಟಿಸಲು ಅವರಿಗೆ ಆಸಕ್ತಿಯಂತೆ.

ADVERTISEMENT

ಈ ಹಿಂದೆ ಮಹೇಶ್‌ ಬಾಬು ಅವರ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಸಾಯಿಪಲ್ಲವಿ ನಿರಾಕರಿಸಿ ಸುದ್ದಿಯಾಗಿದ್ದರು. ಆ ಸಿನಿಮಾದಲ್ಲಿ ತನಗೆ ನಟನೆಗೆ ಹೆಚ್ಚು ಅವಕಾಶವಿಲ್ಲ ಎಂದು ನಿರಾಕರಿಸಿದ್ದರು ಎನ್ನಲಾಗಿದೆ.

ಸದ್ಯ ಅವರು ‘ವಿರಾಟಪರ್ವಂ 1992’ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸುತ್ತಿದ್ದು, ಚಿತ್ರೀಕರಣವು ಜೂನ್‌ 15ರಂದು ಆರಂಭವಾಗಿದ್ದು ತೆಲಂಗಾಣದ ಧರಿಪಲ್ಲಿ ಹಳ್ಳಿಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ನಾಯಕಿ ಪಾತ್ರ ಸವಾಲಾತ್ಮಕವಾಗಿದ್ದು, ಹೀಗಾಗಿ ಈ ಚಿತ್ರದಲ್ಲಿ ನಟಿಸಿಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.