ADVERTISEMENT

ನಟ ಸೈಫ್‌ ಅಲಿ ಖಾನ್‌ ನಿವಾಸದಲ್ಲಿ ಆರೋಪಿಯ ಬೆರಳಚ್ಚು ಪತ್ತೆ: ಮುಂಬೈ ಪೊಲೀಸ್‌

ಪಿಟಿಐ
Published 21 ಜನವರಿ 2025, 3:08 IST
Last Updated 21 ಜನವರಿ 2025, 3:08 IST
ಸೈಫ್‌ ಅಲಿ ಖಾನ್‌
ಸೈಫ್‌ ಅಲಿ ಖಾನ್‌   

ಮುಂಬೈ: ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಪ್ರಕರಣದ ತನಿಖೆಯ ಭಾಗವಾಗಿ ವಿವಿಧ ಸ್ಥಳಗಳಿಂದ ಆರೋಪಿಯ ಬೆರಳಚ್ಚುಗಳನ್ನು ಸಂಗ್ರಹಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 16ರಂದು ಬಾಂದ್ರಾದಲ್ಲಿರುವ ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ನಲ್ಲಿರುವ ಸೈಫ್‌ ಅಲಿ ಖಾನ್‌ ನಿವಾಸದೊಳಗೆ ನುಗ್ಗಿದ್ದ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್, ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಭಾನುವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

‘ಸ್ಥಳೀಯ ಪೊಲೀಸರು ಮತ್ತು ಅಪರಾಧ ವಿಭಾಗವು ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ಗೆ ತೆರಳಿ ಬೆರಳಚ್ಚುಗಳನ್ನು ಸಂಗ್ರಹಿಸಿದೆ. ವಿಧಿವಿಜ್ಞಾನ ತಂಡವೂ ಅಲ್ಲಿಗೆ ಭೇಟಿ ನೀಡಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಸ್ನಾನಗೃಹದ ಕಿಟಕಿ, ಡಕ್ಟ್ ಶಾಫ್ಟ್ ಸೇರಿದಂತೆ ಆರೋಪಿಯ ಬೆರಳಚ್ಚುಗಳು ಅಪರಾಧ ನಡೆದ ಸ್ಥಳದಲ್ಲಿ ಪತ್ತೆಯಾಗಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶದ ಜಲೋಕಾತಿ ಜಿಲ್ಲೆಯವನಾದ ಶೆಹಜಾದ್, ಐದು ತಿಂಗಳಿನಿಂದ ಮುಂಬೈನಲ್ಲಿ ನೆಲೆಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.