ADVERTISEMENT

ಅಭಿಮಾನಿಗಳ ಕಿರಿಕಿರಿ: ಸೆಟ್‌ ಸುತ್ತ ಗೋಡೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 19:45 IST
Last Updated 26 ಆಗಸ್ಟ್ 2019, 19:45 IST
ಸಲ್ಮಾನ್‌ ಖಾನ್‌
ಸಲ್ಮಾನ್‌ ಖಾನ್‌   

‘ದಬಾಂಗ್‌ 3’ ಚಿತ್ರೀಕರಣ ಸೆಟ್‌ ಸುತ್ತ ಎತ್ತರವಾಗಿ ಗೋಡೆ ಕಟ್ಟಿ ಎಂದು ಸಲ್ಮಾನ್‌ ಖಾನ್‌ ಚಿತ್ರತಂಡಕ್ಕೆ ತಿಳಿಸಿದ್ದಾರಂತೆ.

ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಸಲ್ಮಾನ್‌ ಹೋದ ಕಡೆಯೆಲ್ಲಾ ಅವರ ಅಭಿಮಾನಿಗಳು ಅವರನ್ನು ಸುತ್ತುವರಿಯುವುದು ಮಾಮೂಲು ಸಂಗತಿ. ಶೂಟಿಂಗ್‌ ನೋಡಲು ಬಂದವರು ಚಿತ್ರೀಕರಣದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು, ಚಿತ್ರದ ಫೋಟೊಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಹೊಸ ತಲೆನೋವಾಗಿದೆ.

ಹೀಗಾಗಿ ಪುಣೆಯಲ್ಲಿ ಚಿತ್ರದ ಸೆಟ್‌ ಸುತ್ತ ಎತ್ತರದ ಗೋಡೆ ಕಟ್ಟಲು ಸಲ್ಮಾನ್‌ ತಿಳಿಸಿದ್ದಾರೆ ಎಂಬ ಸುದ್ದಿ ಇದೆ.ಈ ಹಿಂದೆ ಜೈಪುರದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿ ಸೋನಾಕ್ಷಿ ಸಿನ್ಹಾ ಅವರ ಜೊತೆಗಿನ ಡಾನ್ಸ್‌ನ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್‌ ಆಗಿತ್ತು. ಇದಕ್ಕಿಂತ ಮುಂಚೆ ಸಲ್ಮಾನ್‌ ನಿರ್ವಹಿಸುತ್ತಿರುವ ಚುಲ್‌ಬುಲ್‌ ಪಾಂಡೆಯ ಯುವಕನ ಪಾತ್ರದ ಫೋಟೊವೂ ಹೀಗೆ ವೈರಲ್‌ ಆಗಿತ್ತು.

ADVERTISEMENT

ಇದರಿಂದ ರೋಸಿಹೋಗಿರುವ ಸಲ್ಮಾನ್‌, ಸೆಟ್‌ನಲ್ಲಿ ಸೆಕ್ಯುರಿಟಿಯನ್ನು ಹೆಚ್ಚು ಮಾಡುವಂತೆ ತಿಳಿಸಿದ್ದಾರೆ. ಹಾಗೇ ಚಿತ್ರೀಕರಣದ ಸ್ಥಳದಲ್ಲಿ ಚಿತ್ರತಂಡದ ಸದಸ್ಯರು ಫೋನ್‌ ಬಳಸುವುದನ್ನು ನಿಷೇಧಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ ಜೊತೆ ನಿರ್ದೇಶಕ ಮಹೇಶ್‌ ಮಂಜ್ರೇಕರ್‌ ಮಗಳು ಸಾಯಿನಟಿಸುತ್ತಿದ್ದಾರೆ.ಸಿನಿಮಾದಲ್ಲಿ ಸಲ್ಮಾನ್‌ ಅವರು ಯುವಕನಾಗಿದ್ದಾಗ ನಡೆಯುವ ಪ್ರೇಮ ಪ್ರಸಂಗದ ಭಾಗದಲ್ಲಿ ಸಾಯಿ ಜೋಡಿಯಾಗಿ ನಟಿಸುತ್ತಿದ್ದಾರೆ.ಇದು ಸಾಯಿ ಅವರ ಚೊಚ್ಚಲ ಚಿತ್ರವಾಗಿದ್ದರಿಂದಅವರ ಫಸ್ಟ್‌ಲುಕ್‌ ಅನ್ನು ವಿಭಿನ್ನವಾಗಿ ತೋರಿಸಲು ಸಲ್ಮಾನ್‌ ನಿರ್ಧರಿಸಿದ್ದಾರೆ. ಹಾಗಾಗಿ ದೃಶ್ಯ ಅಥವಾ ಫೋಟೊಗಳು ಲೀಕ್‌ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ. ಚಿತ್ರ ಡಿಸೆಂಬರ್‌ 20ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.