ADVERTISEMENT

ಸಲ್ಮಾನ್‌ ಕೈ ಹಿಡಿದು ಎಳೆದ ಅಭಿಮಾನಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 19:30 IST
Last Updated 18 ಆಗಸ್ಟ್ 2019, 19:30 IST
ಸಲ್ಮಾನ್‌ ಖಾನ್‌
ಸಲ್ಮಾನ್‌ ಖಾನ್‌   

'ಸಲ್ಮಾನ್‌ ಖಾನ್ ಎಲ್ಲೇ ಹೋದರೂ ಅಭಿಮಾನಿಗಳು ಅವರನ್ನು ಸುತ್ತುವರಿಯುವುದು ಮಾಮೂಲಿ. ಈ ಕಾರಣಕ್ಕೆ ಅವರು ಮುಜುಗರ ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ.

‘ಹಮ್‌ ಆಪ್ಕೆ ಹೈ ಕೌನ್‌’ ಸಿನಿಮಾ ಪ್ರದರ್ಶನ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು. ಆ ವೇಳೆ ಕೂಡ ಅಭಿಮಾನಿಯೊಬ್ಬರಿಂದ ಸಲ್ಮಾನ್‌ ಮುಜುಗರಕ್ಕೆ ಒಳಗಾದರು.

ಮಾಧುರಿ ದೀಕ್ಷಿತ್‌ ಅವರೊಂದಿಗೆ ಸಿನಿಮಾ ನೋಡಲು ಸಲ್ಮಾನ್‌ ಕೂಡ ಹೋಗಿದ್ದರು. ಚಿತ್ರಮಂದಿರದ ಒಳಗೆ ಹೋದ ತಕ್ಷಣ ಮಹಿಳೆಯೊಬ್ಬರು ಸಲ್ಮಾನ್‌ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮನವಿ ಮಾಡಿದರು. ನಟ ಸ್ವಲ್ಪ ಮುಂದೆ ಹೋಗುತ್ತಿದ್ದ ಹಾಗೆಯೇ ಆಕೆ ಅವರನ್ನು ಕೈಹಿಡಿದು ಎಳೆಯಲು ಪ್ರಯತ್ನಿಸುತ್ತಾರೆ. ಭದ್ರತಾ ಸಿಬ್ಬಂದಿ ಅಕೆಯನ್ನು ತಡೆಯುತ್ತಾರೆ.

ADVERTISEMENT

ಮುಜುಗರಕ್ಕೆ ಒಳಗಾದ ಸಲ್ಮಾನ್‌ ಯಾವುದೇ ಪ್ರತಿಕ್ರಿಯೆ ನೀಡದೇ ಸಿನಿಮಾ ನೋಡಲು ಹೋಗುತ್ತಾರೆ. ಈ ವಿಡಿಯೊ ಯೂಟ್ಯೂಬ್‌, ಟ್ವಿಟರ್‌ ಹಾಗೂ ಇತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.