ADVERTISEMENT

ಬುಲೆಟ್ ಪ್ರೂಫ್ ಗಾಜಿನ ಬಾಗಿಲೊಳಗೆ ನಿಂತು ಅಭಿಮಾನಿಗಳನ್ನು ನೋಡಿದ ಸಲ್ಮಾನ್ ಖಾನ್

ನಟ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ₹200 ಕೋಟಿ ಗಳಿಕೆಯನ್ನು ಕಂಡು ಮುನ್ನುಗ್ಗುತ್ತಿದೆ.

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 7:36 IST
Last Updated 1 ಏಪ್ರಿಲ್ 2025, 7:36 IST
<div class="paragraphs"><p>ಸಲ್ಮಾನ್ ಖಾನ್</p></div>

ಸಲ್ಮಾನ್ ಖಾನ್

   

ಬೆಂಗಳೂರು: ನಟ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ₹200 ಕೋಟಿ ಗಳಿಕೆಯನ್ನು ಕಂಡು ಮುನ್ನುಗ್ಗುತ್ತಿದೆ.

ಇತ್ತ ಸಿಕಂದರ್ ಸಿನಿಮಾದ ಖುಷಿಯಲ್ಲಿರುವ ಸಲ್ಮಾನ್ ಖಾನ್ ಈದ್‌ ಉಲ್‌ ಫಿತ್ರ್‌ ಹಬ್ಬದ ಸಂಪ್ರದಾಯದಂತೆ ತಮ್ಮ ಮುಂಬೈನ ಬಾಂದ್ರಾದ ಗ್ಯಾಲಾಕ್ಸಿ ಮನೆಯಿಂದ ಹೊರಗೆ ಬಂದು ಈ ವರ್ಷವೂ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದರು.

ADVERTISEMENT

ಆದರೆ, ಸಲ್ಮಾನ್ ಶುಭಾಶಯ ಕೋರಿದ್ದು ಈ ಸಾರಿ ವಿಶೇಷವಾಗಿತ್ತು. ಈದ್‌ ಉಲ್‌ ಫಿತ್ರ್‌ ಹಬ್ಬದ ಶುಭಾಶಯವನ್ನು ಸಲ್ಮಾನ್ ಅವರು ಬುಲೆಟ್ ಪ್ರೂಫ್ ಗಾಜಿನ ಬಾಗಿಲೊಳಗೆ ನಿಂತು ಅಭಿಮಾನಿಗಳಿಗೆ ಕೈ ಬೀಸಿ ತಿಳಿಸಿದರು. ಈ ವೇಳೆ ಮನೆಯ ಸುತ್ತ ಭಾರಿ ಭದ್ರತೆಯನ್ನು ಒದಗಿಸಲಾಗಿತ್ತು.

ಇದರ ವಿಡಿಯೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿವೆ. ಸಲ್ಮಾನ್ ಅವರಿಗೆ ಹಲವರಿಂದ ಜೀವ ಬೆದರಿಕೆ ಇರುವುದರಿಂದ ಅವರು ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

‘ಗಜಿನಿ‘, ‘ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ‘ ಖ್ಯಾತಿಯ ನಿರ್ದೇಶಕ ಎ.ಆರ್ ಮುರುಗದಾಸ್ ಸಿಕಂದರ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರವು ಸಾಜಿದ್ ನಾದಿಯಾದ್‌ವಾಲಾ ನಿರ್ಮಾಣದಲ್ಲಿ ಮೂಡಿಬಂದಿದೆ. ಮಾರ್ಚ್ 28ಕ್ಕೆ ಸಿನಿಮಾ ಬಿಡುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.