ADVERTISEMENT

ಟೈಗರ್ 3 ಚಿತ್ರೀಕರಣ: ಸಲ್ಮಾನ್‌ ಲುಕ್‌ ಲೀಕ್‌ ಮಾಡಿದ ರಷ್ಯಾ ಫ್ಯಾನ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 9:55 IST
Last Updated 22 ಆಗಸ್ಟ್ 2021, 9:55 IST
ಟೈಗರ್‌ 3 ಚಿತ್ರೀಕರಣದಲ್ಲಿ ಸಲ್ಮಾನ್‌ ಖಾನ್‌
ಟೈಗರ್‌ 3 ಚಿತ್ರೀಕರಣದಲ್ಲಿ ಸಲ್ಮಾನ್‌ ಖಾನ್‌   

ರಷ್ಯಾದಲ್ಲಿ ನಡೆಯುತ್ತಿರುವ ಟೈಗರ್‌ 3 ಚಿತ್ರೀಕರಣದಲ್ಲಿ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಭಾಗವಹಿಸಿದ್ದಾರೆ.

ಶೂಟಿಂಗ್‌ ನಡೆಯುತ್ತಿದ್ದ ವೇಳೆ ರಷ್ಯಾದಲ್ಲಿರುವ ಸಲ್ಮಾನ್‌ ಖಾನ್‌ ಅಭಿಮಾನಿಗಳು ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ಆಗಿರುವ ಈ ಫೋಟೊಗಳಲ್ಲಿ ಸಲ್ಮಾನ್‌ ಲುಕ್‌ ನೋಡಿ ಭಾರತದ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ADVERTISEMENT

ಈಗಾಗಲೇ ಟೈಗರ್–3 ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಂಬೈನಲ್ಲಿ ಮುಕ್ತಾಯವಾಗಿದೆ. ಇದರಲ್ಲಿ ಕತ್ರಿನಾ ಕೂಡ ಭಾಗಿಯಾಗಿದ್ದರು.

ಇದೀಗ ರಷ್ಯಾ, ಆಸ್ಟ್ರೀಯ ಹಾಗೂ ಟರ್ಕಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 18ರಂದು ಪ್ರಯಾಣ ಬೆಳೆಸಿರುವ ಚಿತ್ರತಂಡ 45 ದಿನಗಳ ಕಾಲ ವಿದೇಶಗಳಲ್ಲಿ ತಂಗಲಿದೆ.

ಮನಿಶ್ ಶರ್ಮಾ ಟೈಗರ್‌–3 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲೂ ಸಲ್ಮಾನ್ ಮತ್ತು ಕತ್ರಿನಾ, ಟೈಗರ್ ಹಾಗೂ ಜೋಯಾ ಪಾತ್ರಗಳಲ್ಲಿ ಮುಂದುವರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.