ADVERTISEMENT

ದಬಾಂಗ್‌ –3ಗೆ ತೂಕ ಇಳಿಸಿಕೊಂಡ ಸಲ್ಮಾನ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 19:45 IST
Last Updated 8 ಜುಲೈ 2019, 19:45 IST
Indian Bollywood actor, producer and singer Salman Khan attends the promotion of the upcoming musical romantic drama Hindi film 'Loveyatri' in Mumbai on September 26, 2018. (Photo by Sujit Jaiswal / AFP)
Indian Bollywood actor, producer and singer Salman Khan attends the promotion of the upcoming musical romantic drama Hindi film 'Loveyatri' in Mumbai on September 26, 2018. (Photo by Sujit Jaiswal / AFP)   

ಬಾಲಿವುಡ್‌ನ ಮೋಸ್ಟ್‌ ಬ್ಯಾಚುಲರ್‌ ಎಂದೇ ಗುರುತಿಸಿಕೊಂಡಿರುವ ಸಲ್ಮಾನ್‌ ಖಾನ್‌ ಇತ್ತೀಚೆಗೆ ತಾವು ಕಠಿಣವಾಗಿ ವರ್ಕೌಟ್‌ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗ ಅವರು ಯಾಕೆ ಕಷ್ಟಪಟ್ಟು ವರ್ಕೌಟ್‌ ಮಾಡುತ್ತಿದ್ದರು ಎಂಬ ಗುಟ್ಟು ಬಯಲಾಗಿದೆ.

‘ದಬಾಂಗ್‌’ ಚಿತ್ರ ಸಲ್ಮಾನ್ ಖಾನ್‌ಗೆ ಭಾರಿ ಹೆಸರು ತಂದುಕೊಟ್ಟಿತ್ತು. ಇದೀಗ ದಬಾಂಗ್‌ 3 ಚಿತ್ರಕ್ಕೆ ಸಿದ್ಧತೆ ನಡೆಯುತ್ತಿದೆ. ಆ ಚಿತ್ರಕ್ಕಾಗಿ ಸಲ್ಮಾನ್‌ ಕಟ್ಟುನಿಟ್ಟಿನ ಡಯೆಟ್‌ ಹಾಗೂ ವರ್ಕೌಟ್‌ನಲ್ಲಿ ತೊಡಗಿದ್ದಾರೆ.

‘ದಬಾಂಗ್‌ 3 ಚಿತ್ರದಲ್ಲಿ ಸಲ್ಮಾನ್‌ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಒಂದರಲ್ಲಿ ಮಧ್ಯವಯಸ್ಕನ ಪಾತ್ರ ಹಾಗೂ ಮತ್ತೊಂದು ಪೊಲೀಸ್‌ ಕೆಲಸಕ್ಕೆ ಸೇರುವ ಮುಂಚೆ ಇದ್ದ ಯುವಕನ ಪಾತ್ರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯುವಕನ ಪಾತ್ರಕ್ಕೆ ಸಲ್ಮಾನ್‌ ತನ್ನ ದೇಹವನ್ನು ಹುರಿಗೊಳಿಸಿ ಫಿಟ್‌ ಆಗಿರಬೇಕು. ಇದಕ್ಕಾಗಿ ಈಗಾಗಲೇ ಕಠಿಣ ವರ್ಕೌಟ್‌ ಮಾಡುತ್ತಿರುವ ಸಲ್ಮಾನ್‌ 5ರಿಂದ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ADVERTISEMENT

ಸಲ್ಮಾನ್ ಹಾಗೂ ಕತ್ರಿನಾ ಕೈಫ್ ಜೊತೆಗೆ ನಟಿಸಿರುವ ‘ಭಾರತ್’ ಸಿನಿಮಾವು ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿಯೇ ₹150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ನಿರ್ಮಾಣ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.