ADVERTISEMENT

ಅನುಪಮಾ ಬೇಡವೆಂದ ಪಾತ್ರಕ್ಕೆ ಸಮಂತಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:30 IST
Last Updated 4 ಆಗಸ್ಟ್ 2019, 19:30 IST
   

‘ರಂಗಸ್ಥಲಂ’ ತೆಲುಗು ಸಿನಿಮಾ ಕಳೆದ ವರ್ಷ ಮಾರ್ಚ್‌ನಲ್ಲಿ ತೆರೆಕಂಡು ₹210ಕೋಟಿ ಗಳಿಕೆ ಮಾಡಿತ್ತು. 2018ರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಪಟ್ಟಿಗೂ ಸೇರಿಕೊಂಡಿತ್ತು. ಸಮಂತಾ ಈ ಚಿತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ನಿರ್ದೇಶಕ ಸುಕುಮಾರ್‌ ನಾಯಕಿ ಪಾತ್ರಕ್ಕೆ ನಟಿ ಅನುಪಮಾ ಪರಮೇಶ್ವರನ್‌ ಅವರನ್ನು ಆಯ್ಕೆ ಮಾಡಿದ್ದರಂತೆ. ‘ಡೇಟ್ಸ್‌ ತೊಂದರೆಯಿಂದ ನಾನು ಆ ಸಿನಿಮಾ ನಿರಾಕರಿಸಿದೆ’ ಎಂದು ಅನುಪಮಾ ಪರಮೇಶ್ವರನ್‌ ಈಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ರಾಮ್‌ ಚರಣ್‌ ತೇಜ ಅವರ ನಾಯಕಿಯಾಗಿ ನಾನು ಆಯ್ಕೆಯಾಗಿದ್ದೆ. ಆನಂತರ ಸಮಂತಾ ಆ ಪಾತ್ರ ಮಾಡುವಂತಾಯಿತು. ರಾಮ್‌ ಚರಣ್‌ ಜೊತೆಗೆ ಅಭಿನಯಿಸುವ ಅವಕಾಶ ಮಿಸ್‌ ಆಗಿದ್ದಕ್ಕೆ ಈಗಲೂ ಪಶ್ಚಾತ್ತಾಪವಿದೆ’ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಅನುಪಮಾ ನಟಿಸಲು ನಿರಾಕರಿಸಿದ್ದರಿಂದ ಸುಕುಮಾರ್‌, ಸಮಂತಾ ಅಕ್ಕಿನೇನಿ ಅವರನ್ನು ಕೇಳಿಕೊಂಡರು. ಸಿನಿಮಾ ವಿಶ್ವದಾದ್ಯಂತ ಹಿಟ್‌ ಆಗಿ ಅತಿ ಹೆಚ್ಚು ಗಳಿಕೆಯ ಸಿನಿಮಾಗಳ ಪಟ್ಟಿ ಸೇರಿತು.

2015ರಲ್ಲಿ ‘ಪ್ರೇಮಂ’ ಸಿನಿಮಾ ಮೂಲಕ ಮಾಲಿವುಡ್‌ಗೆ ಕಾಲಿರಿಸಿದ ಅನುಪಮಾ ಪರಮೇಶ್ವರನ್‌ 2016ಕ್ಕೆ ಟಾಲಿವುಡ್‌ಗೆ ಪದಾರ್ಪಣೆ ಮಾಡಿದರು. ತಮಿಳು, ಕನ್ನಡ ಸಿನಿಮಾಗಳು ಸೇರಿದಂತೆ ಐದು ವರ್ಷಗಳಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.