ಸಮಂತಾ ‘ಶುಭಂ’ ಟ್ರೇಲರ್ ಬಿಡುಗಡೆ: ಧಾರಾವಾಹಿ ನೋಡುವ ಹೆಂಗಸರೆಲ್ಲ ದೆವ್ವ ಆದ್ರೆ?!
ಬೆಂಗಳೂರು: ಸಮಂತಾ ರುತ್ ಪ್ರಭು ನಿರ್ಮಿಸಿ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ತೆಲುಗು ಚಿತ್ರ ‘ಶುಭಂ’ ಟ್ರೇಲರ್ ಇಂದು ಬಿಡುಗಡೆಗೊಂಡಿದೆ.
ರಾತ್ರಿ 9 ಗಂಟೆಗೆ ಧಾರಾವಾಹಿ ನೋಡುವ ಹೆಂಗಸರೆಲ್ಲ ದೆವ್ವ ಆಗಿ ಗಂಡಸರಿಗೆ ಭಯ ಹುಟ್ಟಿಸುವ ವಿಭಿನ್ನ ಕಥೆಯನ್ನು ಹೊಂದಿರುವ ಚಿತ್ರ ಇದೇ ಮೇ 9ಕ್ಕೆ ತೆರೆಗೆ ಬರಲಿದೆ.
ವಸಂತ್ ಮರಿಂಗಂಟಿ ಅವರ ಕಥೆಗೆ ಪ್ರವೀಣ್ ಕಂಡ್ರೆಗುಲಾ ನಿರ್ದೇಶನ ಇದೆ.
ಟ್ರಲಾಲಾ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಶ್ರೀಯಾ ಕೊಂತಂ, ಶಾಲಿನಿ ಕೊಂಡೆಪುಡಿ, ಚರಣ್ ಪೇರಿ ಪ್ರಮುಖ ಪಾತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.