ADVERTISEMENT

‘Love ಲಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ ಸಮೀಕ್ಷಾ

​ಪ್ರಜಾವಾಣಿ ವಾರ್ತೆ
Published 2 ಮೇ 2022, 8:34 IST
Last Updated 2 ಮೇ 2022, 8:34 IST
ಸಮೀಕ್ಷಾ
ಸಮೀಕ್ಷಾ   

ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದ ನಟಿ ಸಮೀಕ್ಷಾ ಇದೀಗ, ನಟ ವಸಿಷ್ಠ ಸಿಂಹ ನಾಯಕನಾಗಿ ನಟಿಸುತ್ತಿರುವ ‘Love ಲಿ’ ಸಿನಿಮಾದಲ್ಲಿ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ.

‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯಲ್ಲಿ ಶನಾಯಾ ಪಾತ್ರದಲ್ಲಿ ಮಿಂಚಿದ್ದ ಸಮೀಕ್ಷಾ ನಂತರದಲ್ಲಿ ‘ದಿ ಟೆರರಿಸ್ಟ್‌’ ಸಿನಿಮಾದಲ್ಲಿ ನಟಿ ರಾಗಿಣಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ‘99’ ಸಿನಿಮಾದಲ್ಲಿ ನಾಯಕಿಯ ಬಾಲ್ಯದ ಪಾತ್ರದಲ್ಲಿ ನಟಿಸಿದ್ದ ಈ ಮಲೆನಾಡಿನ ಬೆಡಗಿ, ನಟ ದಿವಂಗತ ಪುನೀತ್‌ ನಟನೆಯ ‘ಜೇಮ್ಸ್‌’ನಲ್ಲೂ ಬಣ್ಣಹಚ್ಚಿದ್ದರು.‘Love ಲಿ’ ಸಿನಿಮಾದಲ್ಲಿಸಮೀಕ್ಷಾ ಕಾರ್ಪೋರೇಟ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಕಾರ್ಯನಿರ್ವಹಿಸಿ ಅನುಭವವಿರುವ ಚೇತನ್ ಕೇಶವ್ ‘Love ಲಿ’ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ಜೊತೆಗೆ ರೌಡಿಸಂನ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ.ಎಂ. ಆರ್. ರವೀಂದ್ರ ಕುಮಾರ್ ನಿರ್ಮಾಣ, ಅನೂಪ್ ಸೀಳಿನ್ ಸಂಗೀತ, ಅಶ್ವಿನ್ ಕೆನೆಡಿ ಛಾಯಾಗ್ರಹಣ ಸಿನಿಮಾಕ್ಕಿದೆ. ಮೇ 4ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.