
ಸಚಿನ್ ಶೆಟ್ಟಿ ನಿರ್ದೇಶನದ ‘ಸಮುದ್ರ ಮಂಥನ’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ಯಶವಂತ್ ಕುಮಾರ್‌ಗೆ ಮಂದಾರ ಬಟ್ಟಲಹಳ್ಳಿ ಜೋಡಿಯಾಗಿದ್ದಾರೆ.
‘ಕುಂದಾಪುರ, ಶಿವಮೊಗ್ಗ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಸಿರು ಗದ್ದೆ, ಸಮುದ್ರತೀರದಂತಹ ಸುಂದರ ಸ್ಥಳಗಳಲ್ಲದೆ, ದಟ್ಟ ಕಾಡು, ಬೆಟ್ಟ-ಗುಡ್ಡಗಳ ದುರ್ಗಮ ತಾಣಗಳಲ್ಲಿ ಸುಮಾರು 34 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭಗೊಂಡಿವೆ. ಮುಂದಿನ ವರ್ಷದ ಮೊದಲಾರ್ಧದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎಂದಿದ್ದಾರೆ ನಿರ್ದೇಶಕ.
ಸಿನಿಮಾದಲ್ಲಿ ಆರು ಫೈಟ್‌ಗಳು, ಮೂರು ಹಾಡುಗಳಿವೆ. ಚಂದ್ರಕಾಂತ್ - ನಿಶಾಂತ್ ಮಧುಗಿರಿ ಸಂಗೀತ, ಯೋಗೇಶ್ ಗೌಡ ಛಾಯಾಚಿತ್ರಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನವಿದೆ. ರಫ್ ಕಟ್ ಪ್ರೊಡಕ್ಷನ್ ಬಂಡವಾಳ ಹೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.