ADVERTISEMENT

ತಗ್ಗದ ವ್ಯವಹಾರಿಕ ಮತ್ತು ಕಲಾತ್ಮಕ ಚಿತ್ರಗಳ ಕಂದಕ: ನಿರ್ದೇಶಕ ಗಿರೀಶ್ ಕಾಸರವಳ್ಳಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:30 IST
Last Updated 1 ಫೆಬ್ರುವರಿ 2020, 19:30 IST
ನಿರ್ದೇಶಕ ಗಿರೀಶ್ ಕಾಸರವಳ್ಳಿ
ನಿರ್ದೇಶಕ ಗಿರೀಶ್ ಕಾಸರವಳ್ಳಿ   

ಶಿವಮೊಗ್ಗ: ವ್ಯವಹಾರಿಕಮತ್ತು ಕಲಾತ್ಮಕ ಚಿತ್ರಗಳ ಮಧ್ಯೆ ದೊಡ್ಡ ಕಂದಕವಿದೆ. ಎರಡೂ ಪ್ರಕಾರಗಳ ಮುಖಾಮುಖಿಯಾಗಿಸುವ ಪ್ರಯತ್ನಗಳು ಚಂದನವನದಲ್ಲಿಅತ್ಯಂತ ಕಡಿಮೆ ಪ್ರಮಾಣದಲ್ಲಿ ನಡೆದಿವೆಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯವಹಾರಿಕ ಮತ್ತು ಕಲಾತ್ಮಕ ಚಿತ್ರಗಳನ್ನು ಸರಿದೂಗಿಸಿಕೊಂಡು ಹೋಗುವ ನಿರ್ದೆಶಕರು ವಿಶ್ವದಲ್ಲೇವಿರಳ. ಮುಖ್ಯವಾಹಿನಿ ಹಾಗೂ ಭಿನ್ನಮಾದರಿಚಿತ್ರಗಳ ಮಧ್ಯೆ ಕಲಾತ್ಮಕ ಚಿತ್ರಗಳ ಛಾಪು ಕಂಡಿದ್ದೇವೆ. ಚಲನಚಿತ್ರಗಳ ಅರ್ಥಿಕ ಸ್ಥಿತಿ, ಸಾಂಸ್ಕೃತಿಕ ಚೌಕಟ್ಟಿನ ಸ್ವರೂಪಗಳುಬೇರೆಯಾಗಿವೆ.ಕಲಾತ್ಮಕ ಚಿತ್ರಗಳನ್ನು ನೋಡುವವರ ಸಂಖ್ಯೆಯೂ ದೊಡ್ಡದಿದೆ. ಅಂತಹ ಚಿತ್ರಗಳನ್ನು ನಿರ್ಮಿಸುವ ಮನಸ್ಸುಗಳು ಇಲ್ಲ. ಕಲಾತ್ಮಕ ಚಿತ್ರಗಳು ಆಯಾ ಭಾಷೆಗೆ ಗೌರವ ಮತ್ತು ಹೆಮ್ಮೆ ತಂದುಕೊಡುತ್ತವೆ. ಮಾರುಕಟ್ಟೆ ಕ್ರಿಯಾಶೀಲತೆಯ ಕೊರತೆಅಂತಹ ಚಿತ್ರಗಳಿಗೆ ಪೆಟ್ಟು ನೀಡುತ್ತವೆ.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಗಂಭೀರ ಪ್ರಯತ್ನಗಳುಆರಂಭವಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಜನತಾ ಥಿಯೇಟರ್ ಕನಸು

ರಾಜ್ಯದಲ್ಲಿಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ.60-70ರ ದಶಕದ ಸ್ಥಿತಿ ಈಗ ಇಲ್ಲ. ಬಹುತೇಕ ಕನ್ನಡ ಚಿತ್ರಗಳು ಬಿಡುಗಡೆಯ ಸಮಸ್ಯೆ ಎದುರಿಸುತ್ತಿವೆ. ಒಳ್ಳೆಯ ಚಿತ್ರಗಳಿಗೆ ಸಿಗಬಹುದಾದ ಮನ್ನಣೆಯೂ ಸಿಗುತ್ತಿಲ್ಲ. ಕನ್ನಡಿಗರೇ ಬಂಡವಾಳ ಹೂಡಿದರೂನಿರ್ವಹಣೆಯ ಹೊಣೆ ಅವರ ಕೈಯಲ್ಲಿ ಇಲ್ಲ. ಬೇರೆ ಬೇರೆ ಭಾಷೆಯ ಕೈಗಳು ಕನ್ನಡ ಚಿತ್ರಗಳನ್ನು ನಿಯಂತ್ರಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್ ಬಾಬು ಅವರು ಗ್ರಾಮೀಣ ಭಾಗಗಳಲ್ಲಿ ಜನತಾ ಥಿಯೇಟರ್ನಿರ್ಮಿಸುವ ಪ್ರಯತ್ನ ನಡೆಸಿದ್ದರು. ಇಂತಹ ಥಿಯೇಟರ್‌ಗಳಲ್ಲೇ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂದು ಕನಸು ಕಂಡಿದ್ದರು. ಆ ಕನಸು ಹಾಗೆಯೇ ಉಳಿದುಕೊಂಡಿದೆ.ಸರ್ಕಾರ ಮನಸ್ಸು ಮಾಡಿದರೆ ಇದು ಸಾಧ್ಯ. ಕನ್ನಡ ಚಿತ್ರಗಳು ಮತ್ತೆ ಬದುಕುತ್ತವೆ ಎಂದು ಪ್ರತಿಪಾದಿಸಿದರು.

ಕ್ರಿಯಾಶೀಲ ಕಿರುಚಿತ್ರಗಳು

ಕನ್ನಡದಲ್ಲಿ ಹೊಸ ಯುವಕರು, ಹೊಸ ನಟರು, ತಂತ್ರಜ್ಞರು, ಸಂಗೀತ ನಿರ್ದೇಶಕರು ಬರುತ್ತಿದ್ದಾರೆ. ಇದಕ್ಕೆ ಕಿರುತೆರೆಯಕೊಡುಗೆಯೂ ಇದೆ. ಕಿರುಚಿತ್ರಗಳೂ ಪ್ರತಿಭೆಗೆ ಮನ್ನಣೆ ನೀಡುತ್ತಿದೆ. ಕ್ರಿಯಾಶೀಲತೆ ಹೆಚ್ಚಿಸಿದೆ. ಆದರೆ, ಈ ಕಿರುಚಿತ್ರಗಳು ತೀರಾ ಚಿಕ್ಕದಾಗಿದ್ದರೆ ಸಿನಿಮಾ ಎನಿಸಿಕೊಳ್ಳುವುದಿಲ್ಲ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷಕೆ.ವಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿವೈದ್ಯ, ನಗರ ಕಾರ್ಯದರ್ಶಿ ವಿ.ಟಿ.ಅರುಣ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.