ADVERTISEMENT

‘ಸಾಲ್ಟ್’ ಸವಿದ ಸೆನ್ಸಾರ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 11:12 IST
Last Updated 8 ಫೆಬ್ರುವರಿ 2021, 11:12 IST
‘ಸಾಲ್ಟ್‌’ ಚಿತ್ರದ ಪೋಸ್ಟರ್‌
‘ಸಾಲ್ಟ್‌’ ಚಿತ್ರದ ಪೋಸ್ಟರ್‌   

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸಾಲ್ಟ್’ಕ್ಕೆ ಸೆನ್ಸಾರ್‌ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಸೆನ್ಸಾರ್‌ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಚಿತ್ರದ ಕಥಾ ಸಾರಾಂಶ ಚೆನ್ನಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ ಎಂದು ಚಿತ್ರತಂಡ ಖುಷಿ ಹಂಚಿಕೊಂಡಿದೆ.

ಚಿತ್ರ ಇದೇ ತಿಂಗಳು ತೆರೆ ಕಾಣುವ ಸಾಧ್ಯತೆ ಇದೆ. ಹಾಗಾಗಿ ಚಿತ್ರದ ಪ್ರಚಾರ ಆರಂಭವಾಗಿದೆ. ಶಾಲಿನಿ ಎಂ. ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಚನೆ, ನಿರ್ದೇಶನ ಹಾಗೂ ಪ್ರಮುಖ ಪಾತ್ರದಲ್ಲಿ ಭರತ್‌ನಂದ ಇದ್ದಾರೆ.ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ, ಜೀವನದಲ್ಲಿ ಸಾಲ್ಟ್ ಅವಶ್ಯಕವೆಂದು ಸಾರುವ ಕತೆ ಇದು. ಚೇತನ್‌ಕುಮಾರ್, ಚಂದ್ರು ಛತ್ರಪತಿ, ಸತೀಶ್‌ಮಳವಳ್ಳಿ ನಾಯಕರಿದ್ದಾರೆ. ತಾರಾಗಣದಲ್ಲಿ ಬಾಲರಾಜ್‌ವಾಡಿ, ಸಂದೀಪ್, ವಿಜಯಶ್ರೀ ಕಲಬುರಗಿ, ಯಶಸ್ವಿನಿಶೆಟ್ಟಿ, ರಶ್ಮಿತಗೌಡ, ಸೂರ್ಯೋದಯ್ ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಇದ್ದಾರೆ.

ರಾಘವೇಂದ್ರ ಕಾಮತ್ ಅವರು ಹಾಡುಗಳನ್ನು ಬರೆದಿದ್ದಾರೆ. ಯಲಸ್ಟಿನ್-ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ.ಸಂಭಾಷಣೆ ಸತೀಶ್‌ಮಳವಳ್ಳಿ ಅವರದ್ದು. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ರಾಜರತ್ನ ಸ್ಟುಡಿಯೋ ಮೂಲಕ ಚಿತ್ರ ಸಿದ್ಧವಾಗಿದೆ.

ADVERTISEMENT

ಚಿತ್ರೀಕರಣ ಪೂರ್ಣಗೊಂಡಾಗ ಚಿತ್ರ ತಂಡವು ದೊಡ್ಡದಾದ ಕುಂಬಳಕಾಯಿ ಒಡೆದು ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.