ADVERTISEMENT

Sandalwood | ‘ಕಮಲ್‌ ಶ್ರೀದೇವಿ’ ಸುತ್ತಾಟ; ಪ್ರಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 23:30 IST
Last Updated 20 ಜುಲೈ 2025, 23:30 IST
ಸಚಿನ್‌, ಸಂಗೀತಾ ಭಟ್‌
ಸಚಿನ್‌, ಸಂಗೀತಾ ಭಟ್‌   

ಸಚಿನ್ ಚಲುವರಾಯ ಸ್ವಾಮಿ, ಸಂಗೀತಾ ಭಟ್ ಜೋಡಿಯಾಗಿ ನಟಿಸುತ್ತಿರುವ ‘ಕಮಲ್‌ ಶ್ರೀದೇವಿ’ ಚಿತ್ರ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದರ ನಡುವೆ ಚಿತ್ರತಂಡ ಭಿನ್ನ ಬಗೆಯ ಪ್ರಚಾರಕ್ಕೆ ಚಾಲನೆ ನೀಡಿದೆ. ನಾಯಕ, ನಾಯಕಿ ಹಾಗೂ ನಟಿ ಅಕ್ಷಿತಾ ಬೋಪಯ್ಯ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿ ಜನಸಾಮಾನ್ಯರ ಜತೆ ಫೋಟೊಶೂಟ್‌ ನಡೆಸುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

‘ಕಮಲ್ ಶ್ರೀದೇವಿ’ ಚಿತ್ರದಲ್ಲಿ ನಾನೇನು? ನನ್ನ ಪಾತ್ರವೇನು? ಅನ್ನೋದಕ್ಕೆ ಈ ಪೋಟೊಶೂಟ್ ಒಂದು ಸುಳಿವು. ಇದು ನಮ್ಮ ಚಿತ್ರದ ಕ್ರಿಯೇಟಿವ್‌ ಹೆಡ್‌ ರಾಜವರ್ಧನ್ ಅವರ ಆಲೋಚನೆ. ಈ ಪ್ರಚಾರಕ್ಕೂ ಚಿತ್ರದ ಕಥೆಗೂ ಸಂಬಂಧವಿದೆ. ಅದು ಚಿತ್ರ ನೋಡಿದಾಗ ತಿಳಿಯುತ್ತದೆ’ ಎನ್ನುತ್ತಾರೆ ಸಂಗೀತಾ ಭಟ್‌.

ಈ ಚಿತ್ರವನ್ನು ವಿ.ಎ ಸುನೀಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.  ಕಿಶೋರ್,ರಮೇಶ್ ಇಂದಿರಾ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಸ್ವರ್ಣಾಂಬಿಕ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಬಿ.ಕೆ.ಧನಲಕ್ಷ್ಮಿ ಚಿತ್ರ ನಿರ್ಮಾಣ ಮಾಡಿದ್ದು, ನಟ ರಾಜವರ್ಧನ್ ಸಹ ನಿರ್ಮಾಣದ ಜತೆಗೆ ಕ್ರಿಯೇಟಿವ್‌ ಹೆಡ್‌ ಆಗಿದ್ದಾರೆ. ಕೀರ್ತನ್ ಸಂಗೀತ, ನಾಗೇಶ್ ವಿ.ಆಚಾರ್ಯ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.