ADVERTISEMENT

Sandalwood: ಎಐ ಸಿನಿಮಾ 'ಲವ್‌ ಯು' ಸೇರಿದಂತೆ ನಾಲ್ಕು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 23:30 IST
Last Updated 15 ಮೇ 2025, 23:30 IST
<div class="paragraphs"><p>ಎಐ ಚಿತ್ರ ‘ಲವ್‌ ಯು’&nbsp;ನಾಯಕಿ&nbsp;</p></div>

ಎಐ ಚಿತ್ರ ‘ಲವ್‌ ಯು’ ನಾಯಕಿ 

   

ಚಂದನವನದಲ್ಲಿ ಇಂದು (ಮೇ 16) ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ.  

ಟಕಿಲಾ

ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ನಿರ್ಮಾಣ ಮಾಡಿರುವ ಚಿತ್ರವಿದು. ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ನಟಿಸಿರುವ ಈ ಚಿತ್ರವನ್ನು ಪ್ರವೀಣ್‌ ನಾಯಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ADVERTISEMENT

ಮನುಷ್ಯ ಯಾವುದಾದರೂ ಚಟಕ್ಕೆ ಅಂಟಿಕೊಂಡು ಅತಿಯಾದಾಗ ಅದರ ಪರಿಣಾಮ ಏನಾಗುತ್ತದೆ ಎನ್ನುವುದು ಈ ಸಿನಿಮಾದ ಕಥೆ. ಮಾದಕ ವ್ಯಸನದ ಸುಳಿಯಲ್ಲಿ ಸಿಲುಕಿಕೊಳ್ಳುವ ಯುವಜನತೆಯ ಸುತ್ತ ಚಿತ್ರದ ಕಥಾಹಂದರವಿದೆ. ಆ್ಯಕ್ಷನ್‌ ಮರ್ಡರ್‌ ಮಿಸ್ಟರಿ ಜಾನರ್‌ನಲ್ಲಿ ಈ ಸಿನಿಮಾವಿದೆ. ಪಿ.ಕೆ.ಎಚ್‌.ದಾಸ್‌ ಛಾಯಾಚಿತ್ರಗ್ರಹಣ, ರೇಣು ಸಂಗೀತ ನಿರ್ದೇಶನ ಚಿತ್ರಕ್ಕಿದೆ. 

ದಿ

ವಿನಯ್‌ ವಾಸುದೇವ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ವಿನಯ್‌ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ವಿ.ಡಿ.ಕೆ. ಸಿನಿಮಾಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ದಿಶಾ ರಮೇಶ್‌ ನಾಯಕಿಯಾಗಿ ನಟಿಸಿದ್ದು, ಹರಿಣಿ ಶ್ರೀಕಾಂತ್‌, ನಾಗೇಂದ್ರ ಅರಸ್‌, ಡಾಲಾ ಶರಣ್‌, ಕಲಾರತಿ ಮಹಾದೇವ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಲೆನ್‌ ಭರತ್‌ ಛಾಯಾಚಿತ್ರಗ್ರಹಣ, ಸಿದ್ಧಾರ್ಥ್‌ ಆರ್‌. ನಾಯಕ್‌ ಸಂಕಲನ, ಯು.ಎಂ.ಸ್ಟೀವನ್‌ ಸತೀಶ್‌ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 

ಲವ್‌ ಯು

ಪೂರ್ಣ ಪ್ರಮಾಣದಲ್ಲಿ ಎಐ ಮೂಲಕವೇ ನಿರ್ಮಾಣಗೊಂಡ ಸಿನಿಮಾವಿದು. ಸಿನಿಮಾದಲ್ಲಿ ಕಲಾವಿದರೆಲ್ಲರೂ ಎಐ ಮೂಲಕವೇ ಸೃಷ್ಟಿಯಾಗಿದ್ದಾರೆ. ಎಐ ತಂತ್ರಜ್ಞಾನ ಮತ್ತು ಸಂಕಲನಕಾರರನ್ನು ಹೊರತುಪಡಿಸಿದರೆ ಬೇರೆ ಯಾವ ತಂತ್ರಜ್ಞರೂ ಚಿತ್ರದಲ್ಲಿಲ್ಲ. ಈ ಹಿಂದೆ ‘ಗರುಡಾಕ್ಷ’, ‘ಕಂಟೈನರ್‌’ ಸಿನಿಮಾಗಳನ್ನು ಮಾಡಿದ್ದ ಎಸ್.ನರಸಿಂಹಮೂರ್ತಿ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸುಮಾರು 20 ಎಐ ಟೂಲ್‌ಗಳನ್ನು ಬಳಸಿ ಸಿನಿಮಾ ಸಿದ್ಧಗೊಂಡಿದೆ. 95 ನಿಮಿಷಗಳ ಈ ಸಿನಿಮಾದಲ್ಲಿ ಒಟ್ಟು 12 ಹಾಡುಗಳಿವೆ. 

ಬಂಡೆ ಸಾಹೇಬ್‌

ಪಿಎಸ್‌ಐ ದಿವಂಗತ ಮಲ್ಲಿಕಾರ್ಜುನ ಬಂಡೆ ಅವರ ಜೀವನಾಧಾರಿತ ಚಿತ್ರವಿದು. ಚಿನ್ಮಯ್‌ ರಾಮ್‌ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕನಾಗಿ ಸಂತೋಷ್‌ ರಾಮ್‌ ನಟಿಸಿದ್ದಾರೆ. ಇದು ಚಿನ್ಮಯ್‌ ಅವರ ಚೊಚ್ಚಲ ಸಿನಿಮಾ. ಗೋಪಣ್ಣ ದೊಡ್ಮನಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಕಾವ್ಯ ಭಾರದ್ವಾಜ್ ನಟಿಸಿದ್ದಾರೆ. ಮುಂಜಾನೆ ಮಂಜು ಛಾಯಾಚಿತ್ರಗ್ರಹಣ, ಎಂ.ಎಸ್‌.ತ್ಯಾಗರಾಜ್‌ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವೀರಣ್ಣ ಕೊರಳ್ಳಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.