ADVERTISEMENT

ಸಿನಿಮಾ | 27ಕ್ಕೆ ‘ಫಿಸಿಕ್ಸ್ ಟೀಚರ್’ ಕ್ಲಾಸ್‌ ಶುರು

​ಪ್ರಜಾವಾಣಿ ವಾರ್ತೆ
Published 10 ಮೇ 2022, 6:48 IST
Last Updated 10 ಮೇ 2022, 6:48 IST
ಪ್ರೇರಣಾ ಕಂಬಂ, ಸುಮುಖ್‌
ಪ್ರೇರಣಾ ಕಂಬಂ, ಸುಮುಖ್‌   

ಕಿರುತೆರೆಯಲ್ಲಿ ಸುಮಾರು ವರ್ಷಗಳಿಂದ ಗುರುತಿಸಿಕೊಂಡಿರುವ ಶಶಿಕುಮಾರ್ ಹಾಗೂ ನಂದಿತಾ ದಂಪತಿ ಪುತ್ರ ಸುಮುಖ ನಟನೆ ನಿರ್ದೇಶನದ ‘ಫಿಸಿಕ್ಸ್ ಟೀಚರ್’ ಮೇ 27ರಂದು ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಜನರ ಮೆಚ್ಚುಗೆ ಪಡೆದಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

‘ಈ ಚಿತ್ರ ನೋಡಿದೆ. ತುಂಬಾ ಚೆನ್ನಾಗಿದೆ. ಸಾಮಾನ್ಯ ಸಿನಿಮಾ ಸೂತ್ರಗಳನ್ನು ಹೊರತುಪಡಿಸಿದ್ದ ಸಿನಿಮಾ. ಸುಮುಖ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದೆ’ ಎಂದರು ಖ್ಯಾತ ವಿಮರ್ಶಕ ಮನು ಚಕ್ರವರ್ತಿ.

‘ಟ್ರೇಲರ್‌ಗೆ ಸಿಕ್ಕ ಪ್ರಶಂಸೆ ಕಂಡು ಖುಷಿಯಾಗಿದೆ. ಬೇರೆಯದೇ ರೀತಿಯ ಸಿನಿಮಾ ಅಂದ ಕೂಡಲೇ ಆರ್ಟ್ ಸಿನಿಮಾ ತರಹವೂ ಅಲ್ಲ. ಸಾಕಷ್ಟು ಕಮರ್ಷಿಯಲ್ ಎಲಿಮೆಂಟ್ ಈ ಚಿತ್ರದಲ್ಲಿದೆ. ಎಲ್ಲಾ ನಟರ ಅಭಿನಯ ಚೆನ್ನಾಗಿದೆ’ ಎಂದರು ನಿರ್ದೇಶಕ - ನಟ ಸುಮುಖ.

ADVERTISEMENT

‘ಬಿಡುಗಡೆಗೂ ಮುನ್ನವೇ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸಂತೋಷವಾಗಿದೆ. ನೋಡಿ ಬೆಂಬಲ ನೀಡಿ’ ಎಂದರು ನಾಯಕಿ ಪ್ರೇರಣ ಕಂಬಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.