ಹೊಸಬರೇ ಸೇರಿಕೊಂಡು ಸಿದ್ಧಪಡಿಸಿರುವ ‘ಓ ಮೈ ಇಂಡಿಯಾ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿದೆ.
ಸಾನ್ವಿಶ್ರೀಯಾ ಪ್ರೊಡಕ್ಷನ್ಸ್‌ನಡಿ ಹಾಸನದ ರಮ್ಯಾ ಲೋಕೇಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪತ್ರಕರ್ತ ಜಿ.ಎನ್.ಕೃಷ್ಣಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ರತನ್‌ದೇವ್ ಹಾಗೂ ಧರಣಿಶ್ರೀ ನಾಯಕಿಯಾಗಿ ನಟಿಸಿದ್ದಾರೆ. ಶಿಕ್ಷಕಿ ಪಾತ್ರದಲ್ಲಿ ಧರಣಿಶ್ರೀ ಬಣ್ಣಹಚ್ಚಿದ್ದಾರೆ. ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ನಟಿಸಿದ್ದು, ಅವಿನಾಶ್, ಸುಚೇಂದ್ರ ಪ್ರಸಾದ್, ಚಿತ್ರಾ ಶೆಣೈ, ಇರ್ಷಾದ್ ಅಹ್ಮದ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಜಿಲ್ಲಾಧಿಕಾರಿ ಪಾತ್ರದಲ್ಲಿ ರತನ್‌ದೇವ್ ನಟಿಸಿದ್ದು, ಸರ್ಕಾರಿ ಅಧಿಕಾರಿಯೊಬ್ಬ ಹೇಗೆ ಸಮಾಜವನ್ನು ಸರಿಪಡಿಸಬಹುದು ಎಂಬುವುದು ಚಿತ್ರದ ಕಥಾಹಂದರ. ‘ದೇಶದ ಶೇಕಡ 95ರಷ್ಟು ಪ್ರಜೆಗಳನ್ನು ಶೇಕಡ 5ರಷ್ಟು ರಾಜಕಾರಣಿಗಳು ಆಳುತ್ತಿದ್ದಾರೆ. ಪ್ರಜೆಗಳೇ ಪ್ರಭುಗಳು ಆಗಬೇಕಾದವರು, ಇಂದು ಚುನಾಯಿತ ಪ್ರತಿನಿಧಿಗಳ ಗುಲಾಮರಾಗುತ್ತಿದ್ದೇವೆ. ಇದರ ವಿರುದ್ಧ ಒಬ್ಬ ಹೋರಾಡಲು ಮುಂದೆ ಬಂದರೆ ಇತರರು ಕೈಜೋಡಿಸುತ್ತಾರೆ. ಆಗ ದೇಶ ಸರಿಯಾದ ಹಾದಿಗೆ ಬರುತ್ತದೆ. ಇಂತಹ ಅರ್ಥಪೂರ್ಣ ವಿಷಯ ಚಿತ್ರದಲ್ಲಿದೆ’ ಎಂದರು ಜಿ.ಎನ್.ಕೃಷ್ಣಮೂರ್ತಿ. ಆಗಸ್ಟ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
ಓ ಮೈ ಇಂಡಿಯಾ ಚಿತ್ರದ ಪೋಸ್ಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.