ADVERTISEMENT

Sandalwood: ‘ಕೊತ್ತಲವಾಡಿ’ ನಿರ್ದೇಶಕ ಶ್ರೀರಾಜ್‌ ಜೊತೆ ಮತ್ತೆ ಪುಷ್ಪ ಸಿನಿಮಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:30 IST
Last Updated 2 ಅಕ್ಟೋಬರ್ 2025, 23:30 IST
ಪುಷ್ಪ 
ಪುಷ್ಪ    

ಪೃಥ್ವಿ ಅಂಬಾರ್‌ ನಟನೆಯ ‘ಕೊತ್ತಲವಾಡಿ’ ಸಿನಿಮಾ ನಿರ್ಮಾಣ ಮಾಡಿದ್ದ ನಟ ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್‌ ಹೊಸ ಸಿನಿಮಾ ಘೋಷಿಸಿದ್ದಾರೆ.

ವಿಶೇಷವೇನೆಂದರೆ ‘ಕೊತ್ತಲವಾಡಿ’ ಸಿನಿಮಾ ನಿರ್ದೇಶಕರೇ ಹೊಸ ಸಿನಿಮಾಗೂ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ವಿಜಯ ದಶಮಿಯಂದು ನೂತನ ಚಿತ್ರದ ಘೋಷಣೆ ಮಾಡಿರುವ ಪುಷ್ಪ ಅವರು ಬಹುತೇಕ ‘ಕೊತ್ತಲವಾಡಿ’ ಚಿತ್ರದ ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ ಎಂದಿದ್ದಾರೆ. ಸದ್ಯದಲ್ಲೇ ನೂತನ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ.

‘ಕೊತ್ತಲವಾಡಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದ ಪುಷ್ಪ ಅವರು ಸಿನಿಮಾ ವಿತರಣೆಯ ವಲಯಕ್ಕೂ ಇತ್ತೀಚೆಗೆ ಹೆಜ್ಜೆ ಇಟ್ಟಿದ್ದರು. ನಟಿ ಅನುಷ್ಕಾ ಶೆಟ್ಟಿ ನಟನೆಯ ತೆಲುಗು ಸಿನಿಮಾ ‘ಘಾಟಿ’ಯನ್ನು ಅವರು ಕರ್ನಾಟಕದಲ್ಲಿ ವಿತರಣೆ ಮಾಡಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.