ADVERTISEMENT

ಇಂದು ಕನ್ನಡದ ಎರಡು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 0:05 IST
Last Updated 21 ಮಾರ್ಚ್ 2025, 0:05 IST
ಬಿಂಬಿಕಾ
ಬಿಂಬಿಕಾ   

ನಾರಾಯಣ ನಾರಾಯಣ

‘ಮಜಾ ಟಾಕಿಸ್’ ಖ್ಯಾತಿಯ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾಕ್ಕೆ ಶ್ರೀಕಾಂತ್ ಕೆಂಚಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ. 

‘ಇದು ನಾಲ್ಕು ವರ್ಷದ ಶ್ರಮ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕೃಷ್ಣನ ಕುರಿತಾದ ಹಾಸ್ಯಮಯ ಕಥಾಹಂದರವಿದೆ’ ಎಂದಿದ್ದಾರೆ ನಿರ್ದೇಶಕರು.

ADVERTISEMENT

ಎರಡು ಹಾಡುಗಳಿದ್ದು ರಾಧಕೃಷ್ಣ ಸಂಗೀತ ನೀಡಿದ್ದಾರೆ. ಕವಿರಾಜ್ ಸಾಹಿತ್ಯವಿದೆ. ಕೃಷ್ಣಪ್ಪ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಗುರುಕಿರಣ್, ಬಿಂಬಿಕಾ, ಕೀರ್ತಿ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

ಬರ್ಗೆಟ್ ಬಸ್ಯಾ

ರಿಶಿ ಹಿರೇಮಠ್ ನಿರ್ದೇಶನದ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ‘ಚಿತ್ರದಲ್ಲಿರುವ ದೃಶ್ಯಗಳು ನಿಜ ಜೀವನದಲ್ಲಿ ನಡೆಯುತ್ತಿದೆ. ನಿಮ್ಮೊಳಗಡೆ ಇನ್ನೊಬ್ಬ ಪಾತ್ರಧಾರಿ ಇರುತ್ತಾನೆ. ಹುಡುಗಿಯರನ್ನು ನೋಡಿದಾಗ ಆ ಪಾತ್ರದಿಂದ ಹೊರಗೆ ಬರುತ್ತಾನೆ. ಈ ಕುರಿತು ಯಾರೂ ಹೇಳಿಕೊಳ್ಳದೆ ಇರುವ ಸಂಗತಿಯನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದಿದ್ದಾರೆ ನಿರ್ದೇಶಕರು. 

ಯರ್ರಂರೆಡ್ಡಿ ಪಿಕ್ಚರ್ಸ್‌ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ಮೊದಲಾದೆಡೆ ಚಿತ್ರೀಕರಣಗೊಂಡಿದೆ. ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಶಾಮ್‌ ಸಾಲ್ವಿನ್ ಛಾಯಾಚಿತ್ರಗ್ರಹಣ, ಸಿದ್ದು ದಳವಾಯಿ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.