ADVERTISEMENT

‘ಕಾಕ್‌ಟೇಲ್‌ 2’ನಲ್ಲಿ ಸಾರಾ ಅಲಿ ಖಾನ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:30 IST
Last Updated 24 ಸೆಪ್ಟೆಂಬರ್ 2019, 19:30 IST
   

‘ಲವ್‌ ಆಜ್‌ಕಲ್‌ 2’ ಸಿನಿಮಾದ ನಂತರ ಈಗ ಮತ್ತೊಂದು ಸೀಕ್ವೆಲ್‌ ಚಿತ್ರಕ್ಕೆ ನಟಿಸಾರಾ ಅಲಿಖಾನ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಈ ಹೊಸಚಿತ್ರವೂ ಸಹ ದೀಪಿಕಾ ಪಡುಕೋಣೆ ಅವರು ನಟಿಸಿದ ಚಿತ್ರವೊಂದರ ಮುಂದಿನ ಅವತರಣಿಕೆಯಾಗಿದೆ.

ಸೈಫ್‌ ಅಲಿ ಖಾನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಲವ್‌ ಆಜ್‌ಕಲ್‌’ ಚಿತ್ರದ ಸೀಕ್ವೆಲ್‌ ‘ಲವ್‌ ಆಜ್‌ಕಲ್‌ 2’ನಲ್ಲಿ ಕಾರ್ತಿಕ್‌ ಆರ್ಯನ್‌ ಜೊತೆ ಸಾರಾ ನಟಿಸುತ್ತಿದ್ದಾರೆ. ಈಗ ‘ಕಾಕ್‌ಟೇಲ್‌’ ಚಿತ್ರದ ಸೀಕ್ವೆಲ್‌ ಮಾಡಲು ನಿರ್ದೆಶಕ ದಿನೇಶ್‌ ವಿಜನ್‌ ಮುಂದಾಗಿದ್ದಾರೆ. ಇದುದೀಪಿಕಾ ಪಡುಕೋಣೆ ಅಭಿನಯದ ಮತ್ತೊಂದು ಜನಪ್ರಿಯ ಚಿತ್ರ.

ಕಾಕ್‌ಟೇಲ್‌ 2 ಚಿತ್ರದ ನಿರ್ಮಾಪಕರು ಸಾರಾ ಅಲಿಖಾನ್‌ ಅವರನ್ನು ಭೇಟಿ ಮಾಡಿ, ಮೊದಲ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಿರ್ವಹಿಸಿದ ಪಾತ್ರವನ್ನು ಮಾಡಲು ಮಾತುಕತೆ ನಡೆಸಿದ್ದಾರೆ. ಸಾರಾ ಈಗಾಗಲೇ ಅವಕಾಶವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ADVERTISEMENT

ಸಾರಾ ಅಲಿ ಖಾನ್‌ ಬಾಲಿವುಡ್‌ಗೆ ಪ್ರವೇಶ ಮಾಡಿದಾಗಿನಿಂದ ಒಂದರ ಹಿಂದೆ ಒಂದರಂತೆ ಸಾಲು ಸಾಲು ಸಿನಿಮಾಗಳ ಅವಕಾಶಗಳು ಬರುತ್ತಿವೆ. ಈ ಚಿತ್ರದ ನಿರ್ದೇಶಕದಿನೇಶ್‌ ‌ವಿಜನ್‌ಗೆ ಸಾರಾ ಅವರ ಸ್ಕ್ರೀನ್‌ ಪ್ರೆಸೆನ್ಸ್‌ ತುಂಬಾ ಇಷ್ಟವಾಗಿದೆಯಂತೆ.

‘ಸಾರಾ ಅವರು ‘ಅಂಗ್ರೇಜಿ ಮೀಡಿಯಂ’ ಚಿತ್ರದಲ್ಲಿ ನಟಿಸಬೇಕಾಗಿತ್ತು. ಆದರೆ ಸಿನಿಮಾ ಡೇಟ್ಸ್‌ಗಳು ಹೊಂದಾಣಿಕೆಯಾಗದಿದ್ದರಿಂದ ನಟಿಸಲಾಗಲಿಲ್ಲ. ದಿನೇಶ್‌ ವಿಜನ್‌, ಸಾರಾ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದರು. ಈಗ ಕಾಕ್‌ಟೇಲ್‌ ಸೀಕ್ವೆಲ್‌ ಚಿತ್ರ ಸೆಟ್ಟೇರಲಿದೆ. ಅದಕ್ಕೆ ಸಾರಾ ಅವರ ಜೊತೆ ಮಾತುಕತೆ ನಡೆಸಿದರು’ ಎಂದು ಮೂಲಗಳು ತಿಳಿಸಿವೆ.

‘ಕೂಲಿ ನಂ.1’ ಚಿತ್ರದ ಮುಗಿಸಿದ ನಂತರ ಆನಂದ್‌ ರಾಯ್‌ ಅವರ ಹೊಸ ಚಿತ್ರದಲ್ಲಿ ಸಾರಾ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.