ADVERTISEMENT

ಹಿರಿಯ ನಟ ಉದಯ ಕುಮಾರ್ ಪತ್ನಿ ಸುಶೀಲಾದೇವಿ ಉದಯ ಕುಮಾರ್ ನಿಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 21:49 IST
Last Updated 8 ಸೆಪ್ಟೆಂಬರ್ 2021, 21:49 IST
ಸುಶೀಲಾದೇವಿ
ಸುಶೀಲಾದೇವಿ   

ಬೆಂಗಳೂರು: ಚಿತ್ರನಟ ದಿವಂಗತ ಉದಯಕುಮಾರ್‌ ಅವರ ಪತ್ನಿ ಸುಶೀಲಾ ದೇವಿ (84) ಅವರು ಬುಧವಾರ ಅನಾರೋಗ್ಯದಿಂದ ನಿಧನ ರಾದರು.

ಉದಯಕುಮಾರ್‌ ಅವರು ಸ್ಥಾಪಿಸಿದ್ದ ಉದಯಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಅವರುನಟನೆ, ನೃತ್ಯ, ಸಂಗೀತ ತರಬೇತಿ ನೀಡುತ್ತಿದ್ದರು.

1960–70ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೇರುನಟನಾಗಿ ಸಾಧನೆ ಮಾಡಿದ ‘ಕಲಾಕೇಸರಿ’ ಉದಯ ಕುಮಾರ್‌ ನೆನಪಿನಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದರು.

ADVERTISEMENT

ಅವರಿಗೆಪುತ್ರಿಯರಾದ ವರ್ಧಿನಿ ಮೂರ್ತಿ, ರೇಣುಕಾಬಾಲಿ ಉದಯ ಕುಮಾರ್ ಇದ್ದಾರೆ. ಉದಯಕುಮಾರ್‌ ಅವರ ಮೊದಲ ಪತ್ನಿ ಕಮಲಮ್ಮ 2019ರ ಡಿ. 11ರಂದು ನಿಧನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.