ADVERTISEMENT

ಶಾರುಖ್ ಖಾನ್‌ಗೆ ₹ 9 ಕೋಟಿ ಪಾವತಿಸಲಿದೆ ಮಹಾರಾಷ್ಟ್ರ ಸರ್ಕಾರ: ಏಕೆ?

ಪಿಟಿಐ
Published 26 ಜನವರಿ 2025, 4:54 IST
Last Updated 26 ಜನವರಿ 2025, 4:54 IST
ಶಾರುಖ್ ಖಾನ್
ಶಾರುಖ್ ಖಾನ್   

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರು ತಮ್ಮ ನಿವಾಸ 'ಮನ್ನತ್‌'ನ ಗುತ್ತಿಗೆ ಪರಿವರ್ತನೆ ಸಲುವಾಗಿ ಮುಂಗಡವಾಗಿ ₹ 9 ಕೋಟಿಯನ್ನು ಹೆಚ್ಚುವರಿಯಾಗಿ ಪಾವತಿಸಿದ್ದರು. ಇದೀಗ, ಆ ಹಣವನ್ನು ಮಹಾರಾಷ್ಟ್ರ ಸರ್ಕಾರ ಮರುಪಾವತಿಸಲಿದೆ.

ಬಾಂದ್ರಾದಲ್ಲಿ ಗುತ್ತಿಗೆ ಪಡೆದಿದ್ದ ಆಸ್ತಿಯ ಪೂರ್ಣ ಮಾಲೀಕತ್ವಕ್ಕಾಗಿ ಶಾರುಖ್‌ ಖಾನ್‌ ಹಾಗೂ ಅವರ ಪತ್ನಿ ಗೌರಿ ಖಾನ್‌ ಅವರು 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕಾಗಿ ಮುಂಗಡವಾಗಿ ಹಣ ಪಾವತಿಸಿದ್ದರು ಎಂದು ಉಪನಗರ ಕಲೆಕ್ಟರ್‌ ಸತೀಶ್‌ ಬಾಗಲ್‌ ಅವರು ತಿಳಿಸಿದ್ದಾರೆ.

ಲೆಕ್ಕಾಚಾರ ದೋಷದಿಂದಾಗಿ ಹೆಚ್ಚಿನ ಹಣ ಪಾವತಿಸಿರುವುದು ತಿಳಿದ ನಂತರ ಖಾನ್‌ ದಂಪತಿ, ಕಂದಾಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಪಾವತಿ ಮಾಡಿರುವ ಹೆಚ್ಚುವರಿ ಹಣವನ್ನು ಹಿಂದಿರುಗಿಸುವಂತೆ ಕೋರಿದ್ದರು.

ADVERTISEMENT

ಹಕ್ಕು ಪರಿವರ್ತನೆಗಾಗಿ ₹ 25 ಕೋಟಿ ಪಾವತಿಸಿದ್ದರು ಎಂದು ವರದಿಯಾಗಿದೆ. ಆದರೆ, ಅಧಿಕಾರಿಗಳು ಅದನ್ನು ಖಚಿತಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.