ADVERTISEMENT

ಅಭಿಮಾನಿಗಳೆಂಬ ಸಮುದ್ರದ ಮುಂದೆ ಜೀವಿಸಲು ಸಂತಸವಾಗುತ್ತದೆ: ಶಾರುಖ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2022, 13:40 IST
Last Updated 2 ನವೆಂಬರ್ 2022, 13:40 IST
ಶಾರುಖ್ ಖಾನ್
ಶಾರುಖ್ ಖಾನ್   

ಮುಂಬೈ: ಅಭಿಮಾನಿಗಳೆಂಬ ಸಮುದ್ರದ ಮುಂದೆ ಜೀವಿಸಲು ಸಂತಸವಾಗುತ್ತದೆ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ.

ಅವರು ಇಂದು (ನ.2) ತಮ್ಮ 57 ನೇ ಜನ್ಮದಿನದ ಕುರಿತು ಮುಂಬೈನ ಜನ್ನತ್ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳನ್ನುದ್ದೇಶಿಸಿ ಈ ರೀತಿ ಟ್ವೀಟ್ ಮಾಡಿದ್ದಾರೆ.

‘ಸಮುದ್ರದ ಮುಂದೆ ಬದುಕುವುದು ತುಂಬಾ ಸೊಗಸಾಗಿದೆ ಇದೋ ನೋಡಿ ನನ್ನ ಜನ್ಮದಿನದಂದು ನನ್ನ ಸುತ್ತಲೂ ಹರಡಿರುವ ಪ್ರೀತಿಯ ಸಮುದ್ರ.. ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.ಶಾರುಖ್ ಅವರ ಮನೆ ಸಮುದ್ರದ ಮುಂದೆ ಇದೆ.

ADVERTISEMENT

ತಮ್ಮ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರಲು ಅಭಿಮಾನಿಗಳು ನಿನ್ನ ಮಧ್ಯೆ ರಾತ್ರಿಯಿಂದ ಅವರ ನಿವಾಸದ ಸುತ್ತ ನೆರೆದಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಶಾರುಖ್ ಮನೆ ಸುತ್ತ ಜಮಾಯಿಸಿದ್ದರಿಂದ ಪೊಲೀಸರು ವ್ಯಾಪಕ ಬಂದೋಬಸ್ತ್‌ ಮಾಡಿದ್ದರು.

ಪ್ರತಿ ವರ್ಷದಂತೆ ಈ ವರ್ಷವೂ ಅವರು ಮನೆಯ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆಕೈಜೋಡಿಸಿ ನಮಸ್ಕರಿಸಿ ಧನ್ಯವಾದ ಹೇಳಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲೂ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಸಿನಿಮಾರಂಗದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.